ಉಡುಪಿಯ ಸಮಾಜಸೇವಕ ವಿಶು ಶೆಟ್ಟಿಯವರಿಂದ 150 ಜನಕ್ಕೆ ಅನ್ನದಾನ !

 
ಉಡುಪಿಯ ಸಮಾಜಸೇವಕ ವಿಶು ಶೆಟ್ಟಿಯವರಿಂದ 150 ಜನಕ್ಕೆ ಅನ್ನದಾನ !

ಉಡುಪಿಯ ಸಮಾಜಸೇವಕ ವಿಶು ಶೆಟ್ಟಿಯವರಿಂದ 150 ಜನಕ್ಕೆ ಅನ್ನದಾನ !

ಉಡುಪಿ : ಇಂದು ಬೆಳಿಗ್ಗೆ 150ಕ್ಕೂ ಅಧಿಕ ಜನರಿಗೆ ಚಹಾ ತಿಂಡಿ ವಿತರಿಸಿ ಸಮಾಜಸೇವಕ ವಿಶು ಶೆಟ್ಟಿ . ಮನೆ ಇಲ್ಲದೆ ಬೀದಿ ಬದಿಯಲ್ಲಿ ಇರುವ ವಲಸೆ ಕಾರ್ಮಿಕರು ಮತ್ತು ಕೆಲವು ನಿರ್ಗತಿಕರಿಗೆ ಕಳೆದ ಐದಾರು ದಿನಗಳಿಂದ ಎರಡು ಹೊತ್ತು ಊಟ ಮತ್ತು ಚಹಾ ವಿತರಿಸುವ ಕೆಲಸವನ್ನು ವಿಶು ಶೆಟ್ಟಿ ಅವರು ಮಾಡುತ್ತಿದ್ದಾರೆ.

ಉಪಹಾರವನ್ನು ವಿತರಿಸುವ ಸಂದರ್ಭದಲ್ಲಿ ಮೂರು ಮೀಟರ್ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ರೋಗಾಣು ಹರಡದಂತೆ ಎಚ್ಚರಿಕೆ ವಹಿಸಿದ್ದಾರೆ.

ವೆಲ್ಡಿಂಗ್ ಶಾಪ್ ನಡೆಸುತ್ತಿರುವ ವಿಶ್ವ ಶೆಟ್ಟಿ ತನ್ನ ದುಡಿಮೆಯ ಬಹುಪಾಲನ್ನು ಸಮಾಜ ಸೇವೆಗೆ ವ್ಯಯಿಸುತ್ತಿದ್ದಾರೆ. ಕೊರೊನಾ ಎಮರ್ಜೆನ್ಸಿ ಘೋಷಣೆಯಾದ ಮರುದಿನದಿಂದಲೇ ವಿಶ್ವ ಶೆಟ್ಟಿ ಬಡವರ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

ಇವರು ಆಹಾರ ವಿತರಿಸಲು ಆರಂಭಿಸಿದ ಬಳಿಕ ಉಡುಪಿಯ ಇತರ ಸಮಾಜಪರ ಸಂಘಟನೆಗಳು ಆಹಾರ ವಿತರಿಸುವ ಯೋಜನೆ ಕೈಗೆತ್ತಿಕೊಂಡವು.

From Around the web