Fri. May 29th, 2020

Democratic TV

Democratic TV Kannada News | ಡೆಮಾಕ್ರಟಿಕ್ ಟಿವಿ

ಎರಡನೇ ವರ್ಷದ ಇ-ಸಿಟಿ ಹಬ್ಬ ಆಚರಣೆ

1 min read

  • ಪ್ರತಿದಿನ ಕೆಲಸದ ಒತ್ತಡದ ಮಧ್ಯೆ ಇದ್ದ ಉದ್ಯೋಗಿಗಳು
  • ಒಟ್ಟಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಲ್ ಎಂಜಾಯ್

ಆನೇಕಲ್: ಬೆಂಗಳೂರಿನ ಜನರು ಯಾವಾಗ್ಲೂ ಬ್ಯೂಸಿ ಲೈಫ್ ಲೀಡ್ ಮಾಡ್ಕೊಂಡು ಇರ್ತಾರೆ. ಪ್ರತಿದಿನದ ಕೆಲಸ ಟ್ರಾಫಿಕ್ ಜಂಜಾಟಗಳ ಮಧ್ಯೆ ಒತ್ತಡದಲ್ಲಿರುತ್ತಾರೆ. ಇನ್ನು ಸಮಯ ಸಿಕ್ಕಾಗ ಮಾಲ್, ಪಾರ್ಕ್, ಸಿನಿಮಾ, ಲಾಂಗ್ ಡ್ರೈವ್ ಅಂತ ಸುತ್ತಾಡಿ ಸಾಕಾಯ್ತು ಅಂತಿದ್ದ ಜನ್ರು ಇಂದು ಎಲ್ಲರೂ ಒಟ್ಟಿಗೆ ಸೇರಿ ಕಲರ್ ಫುಲ್ ಹಬ್ಬವನ್ನು ಆಚರಿಸಿದ್ರು.

ತಮಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಸವಿದ್ರು. ಮನಸಿಗ್ಗೆ ಮುದ ನೀಡೋ ಡ್ಯಾನ್ಸ್ ಮ್ಯೂಸಿಕಲ್ ಕಾರ್ಯದಲ್ಲಿ ಕುಣಿದು ಕುಪ್ಪಳಿಸಿದ್ರು. ಪುಟಾಣಿ ಮಕ್ಕಳು ಆಟವಾಡುತ್ತಾ ಮಸ್ತಿ ಮಾಡಿ ಎಂಜಾಯ್ ಮಾಡಿದ್ರು. ಇದೆಲ್ಲಾ ನಡೆದಿದ್ದಾದ್ರು ಎಲ್ಲಿ ಅಂತೀರ ನೋಡಿ ಈ ಸ್ಟೋರಿಯಲ್ಲಿ.

ಒಂದೆಡೆ ಪುಟಾಣಿ ಮಕ್ಕಳ ಆಟ ತುಂಟಾಟ. ಇನ್ನೊಂದೆಡೆ ಬೆಡಗು ಬಿನ್ನಾಣದ ಶಾಪಿಂಗ್ ಮಳಿಗೆಗಳು. ಬಂದಂತಹ ಜನರ ಹೊಟ್ಟೆ ಹಸಿವನ್ನು ನೀಗಿಸಲು ತರಹೇವಾರಿ ಫುಡ್ ಗಳು. ಮನಸಿಗೆ ಮುದ ನೀಡೋ ಡ್ಯಾನ್ಸ್ ಹಾಗು ಮ್ಯೂಸಿಕಲ್ ಕಾರ್ಯಕ್ರಮ ಈ ಎಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಬೆಂಗಳೂರಿಗೆ ಹೊಂದಿಕೊಂಡಿರುವಂತಹ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇನ್ಪೋಸಿಸ್ ಮೈದಾನದಲ್ಲಿ ಆಯೋಜಿಸಿದ್ದ ಎರಡನೇ ವರ್ಷದ ಇ-ಸಿಟಿ ಹಬ್ಬದಲ್ಲಿ.

ಎಲೆಕ್ಟ್ರಾನಿಕ್ ಸಿಟಿ ಅಂದ ಕೂಡಲೇ ಮನಸಿಗೆ ಬರೋದು ಅತಿಹೆಚ್ವು ಐಟಿಬಿಟಿ ಕಂಪನಿಗಳಿರುವಂತಹ ಪ್ರದೇಶ ಅಲ್ಲಿ ಪ್ರತಿ ದಿನ ಕೆಲಸ ಮಾಡುವಂತಹ ಜನ್ರು ವಾರಪೂರ್ತಿ ದಣಿದು ಕೆಲಸದ ಒತ್ತಡದ ಮಧ್ಯೆ ಸುತ್ತಾಗಿರ್ತಾರೆ. ಕೆಲಸದ ಮಧ್ಯೆ ವರ್ಷಕ್ಕೊಮ್ಮೆ ನಡೆಯುವ ಇ ಸಿಟಿ ಹಬ್ಬದಲ್ಲಿ ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಕೆಲಸ ಮಾಡುತ್ತಿರುವ ಜನ ಎಲ್ಲರೂ ಒಟ್ಟಿಗೆ ಸೇರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂಜಾಯ್ ಮಾಡುತ್ತಾರೆ.

ಇನ್ನು ತಮ್ಮ ಟ್ಯಾಲೆಂಟ್ ಗಳನ್ನು ಪ್ರದರ್ಶಿಸುವ ಒಂದು ಅವಕಾಶಕೂಡ ಇದಾಗಿದ್ದು ಅಲ್ಲದೆ ತರಹೇವಾರಿ ಶಾಪ್ ಗಳು ಒಂದೇ ಸೂರಿನಡಿಯಲ್ಲಿ ವಿವಿಧ ರೀತಿ ವಸ್ತುಗಳ ಶಾಪಿಂಗ್ ಅನುಭವ ಕೊಟ್ಟಿತ್ತು. ಇನ್ನು ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಡ್ರಾಯಿಂಗ್ ಸ್ಪರ್ಧೆ, ಆಟಗಳು, ಹೊಟ್ಟೆ ಹಸಿವನ್ನು ನೀಗಿಸುವ ತರಹೇವಾರಿ ಫುಡ್ ಗಳು, ಮನಸ್ಸಿಗೆ ಮುದ ನೀಡುವ ಭರತನಾಟ್ಯ, ಡ್ಯಾನ್ಸ್, ಸಂಗೀತ ಕಾರ್ಯಕ್ರಮ ಹೀಗೆ ಹಲವು ಮನರಂಜನೆ‌ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಉದ್ಯೋಗಿಗಳು ತಮ್ಮ ಕುಟುಂಬದ ಜೊತೆ ಫುಲ್ ರಿಲ್ಯಾಕ್ಸ್ ಆದ್ರು.

ಇನ್ನು ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಅತಿಹೆಚ್ಚು ಐಟಿಬಿಟಿ ಕಂಪನಿಗಳಿದ್ದು ಪ್ರತಿದಿನ ಒಂದೇ ಕಡೆ ಕೆಲಸ ಮಾಡಿದ್ರು ಸಹ ಒಬ್ಬರಿಗೆ ಒಬ್ಬರು ಪರಿಚಯ ಇರೋದಿಲ್ಲ. ಇಂತಹ ಕಾರ್ಯಕ್ರಮ ಮಾಡಿದಾಗ ಎಲ್ಲರೂ ಒಟ್ಟಿಗೆ ಸೇರಿದಾಗ ಒಂದು ಸ್ನೇಹ ಬಾಂಧವ್ಯ ಬೆಳೆಯುತ್ತದೆ. ಇನ್ನು ಇತ್ತೀಚೆಗೆ ಎಲ್ಲರೂ ವಾಟ್ಸಾಪ್, ಟ್ವಿಟರ್, ಫೇಸ್ಬುಕ್ ಹೀಗೆ ಪೋನ್ ನಲ್ಲಿಯೇ ಇಡೀ ದಿನ ಇರ್ತಾರೆ ಇಲ್ಲ ಎಲ್ಲಿಯಾದ್ರು ಹೊರಗಡೆ ಹೋಗಬೇಕು ಅಂದ್ರೆ ಅದೇ ಶಾಪಿಂಗ್ ಮಾಲ್, ಮೂವೀ,ಪಾರ್ಕ್ ಗೆ ಹೋಗಬೇಕು ವಾರಕ್ಕೊಮ್ಮೆ ಇದೇ ಪ್ಲೇನ್ ಇರುತ್ತದೆ. ವರ್ಷಕ್ಕೆ ಎರಡು ಬಾರಿ ಇಂತಹ ಕಾರ್ಯಕ್ರಮವನ್ನು ಮಾಡೋದ್ರಿಂದ ಒಬ್ಬರಿಗೊಬ್ಬರು ಪರಿಚಯವಾಗುತ್ತದೆ. ಕೆಲಸದ ಮಧ್ಯೆ ನಮಗೂ ಮನಸ್ಸಿಗೆ ಒಂದು ರಿಲೀಫ್ ಸಿಕ್ಕಾಂತಾಗುತ್ತದೆ ಎನ್ನುತ್ತಾರೆ ಇ ಸಿಟಿ ಹಬ್ಬದಲ್ಲಿ ಭಾಗವಹಿಸಿದ್ದವರು.

‌ಇನ್ನು ಇ-ಸಿಟಿ ಹಬ್ಬವನ್ನು ಕಳೆದ ಒಂದು ವರ್ಷದ ಹಿಂದೆ ಇ-ಸಿಟಿ ಹಬ್ಬ ಆಚರಣೆ ಮಾಡಿ ಒಮ್ಮೆ ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಕೆಲಸ ಮಾಡುವಂತಹ ಎಲ್ಲರೂ ಒಟ್ಟಿಗೆ ಸೇರಿ ಆಚರಣೆ ಮಾಡುವ ಮೂಲಕ ಎಂಜಾಯ್ ಮಾಡಿದ್ರು. ಅದರಂತೆಯೇ ಈ ಬಾರಿಯೂ ಎರಡನೇ ವರ್ಷದ ಇ-ಸಿಟಿ ಹಬ್ಬವನ್ನು ಆಯೋಜಿಸಿದ್ದು, ಇಲ್ಲಿ ಕೆಲಸ ಮಾಡುವಂತವರ ಟ್ಯಾಲೆಂಟ್‌ ಪ್ರದರ್ಶಿಸುವ ವೇದಿಕೆ ಇದಾಗಿದೆ. ಇನ್ನು ಯಾವಾಗಲೂ ಕೆಲಸದ ಮಧ್ಯೆ ಇರುವಂತಹ ಉದ್ಯೋಗಿಗಳಿಗೆ ಒಂದು ಪಾಸಿಟಿವ್ ಎನರ್ಜಿ ಬರಲಿ, ಅವರು ಒತ್ತಡದಿಂದ ರಿಲೀಫ್ ಆಗಲಿ ಎಂದು ಕಾರ್ಯಕ್ರಮವನ್ನು ರೂಪಿಸಿದ್ದು, ಇನ್ನು ಪ್ರತಿದಿನ ಕಂಪನಿಗೆ ಉದ್ಯೋಗಿಗಳು ಒಂದೇ ಬಸ್ ನಲ್ಲಿ ಬಂದ್ರು ಒಬ್ಬರಿಗೆ ಒಬ್ಬರು ಪರಿಚಯ ಇರೋದಿಲ್ಲ. ಈ ರೀತಿ ಕಾರ್ಯಕ್ರಮ ಮಾಡುವುದರಿಂದ ಒಂದು ಬಾಂಧವ್ಯ ಬೆಳೆಯೋದಕ್ಕೆ ಕಾರಣವಾಗುತ್ತದೆ ಎಲ್ಲರೂ ಒಟ್ಟಿಗೆ ಸೇರುವಂತಾಗುತ್ತದೆ.

ಬೆಂಗಳೂರಿನಲ್ಲಿ ರಿಲ್ಯಾಕ್ಸ್ ಆಗೋಕೆ ಅಂತಾನೇ ಸಾಕಷ್ಟು ಶಾಪಿಂಗ್ ಮಾಲ್ ಗಳು, ಮಲ್ಟಿ ಫ್ಲೆಕ್ಸ್ ಗಳು ಇವೆ. ಅಂತಹುದರಲ್ಲಿ ಎಲ್ಲರೂ ಒಟ್ಟಿಗೆ ಸೇರಿ ನಮ್ಮ ಸಾಂಸ್ಕೃತಿಕ ವೈಭವವನ್ನು ಸಾರುವ ಮನರಂಜನೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದಿನ ಕಳೆಯೋದೆ ಒಂದು ಸಂತೋಷ. ಒಟ್ಟಿನಲ್ಲಿ ಎಲೆಕ್ಟ್ರಾನಿಕ್ ಸಿಟಿ ಭಾಗದ ಮಂದಿ ಇಂತಹ ಕಾರ್ಯಕ್ರಮಗಳು ವರ್ಷಕ್ಕೆ ಎರಡು ಮೂರು ಬಾರಿಯಾದ್ರು ಮಾಡಲಿ ಅಂದುಕೊಂಡಿರುವುದಂತು ಸುಳ್ಳಲ್ಲ.

ಅಂಬರೀಶ್ ಆನೇಕಲ್ ಡೆಮಾಕ್ರಟಿಕ್ ಟಿವಿ

Please follow and like us:
Copyright © Democratic TV 2019. All rights reserved. | Newsphere by AF themes.
error

Enjoy this blog? Please spread the word :)

YouTube
YouTube