ಮನೆ ಕಿಟಕಿ ಮೂಲಕ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ

 
ಮನೆ ಕಿಟಕಿ ಮೂಲಕ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ

ಆನೇಕಲ್: ರಾತ್ರಿ ವೇಳೆ ಮನೆಯ ಕಿಟಕಿಯ ಮೂಲಕ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧನ ಮಾಡುವಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಚಂದಾಪುರ ಸಮೀಪದ ಬನಹಳ್ಳಿ ನಿವಾಸಿ ನಾರಾಯಣಸ್ವಾಮಿ ಅಲಿಯಾಸ್ ಗೂಳಿ ಬಂಧಿತ ಆರೋಪಿಯಾಗಿದ್ದು, ಈತನಿಂದ ಕಳವು ಮಾಡಿದ್ದ ಮೂರು ಲಕ್ಷ ಬೆಲೆಬಾಳುವ ವಸ್ತುಗಳಾದ 5 ಗ್ರಾಂ ಚಿನ್ನಾಭರಣ, 150 ಗ್ರಾಂ ಬೆಳ್ಳಿ, 1 ಸೋನಿ ಕಂಪನಿಯ ಲಾಪ್ ಟಾಪ್, 2 ಸ್ಯಾಮ್ ಸಾಂಗ್ ಕಂಪನಿಯ ಟ್ಯಾಬ್ ಗಳು ಹಾಗೂ 20 ವಿವಿಧ ಕಂಪನಿಯ ಪೋನ್ ಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ಈ ಆರೋಪಿಯು ಈ ಹಿಂದೆಯೂ ಸಹ ಹಲವು ಅಪರಾಧ ಹಾಗೂ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆಯನ್ನು ಅನುಭವಿಸಿ ಹೊರಬಂದಿದ್ದರು ಸಹ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿದ್ದ.

ಮತ್ತೆ ಅದೇ ಕಳ್ಳತನದ ಪ್ರವೃತ್ತಿಯನ್ನು ಮುಂದುವರೆಸಿ ಎಲೆಕ್ಟ್ರಾನಿಕ್ ಸಿಟಿ, ಚಂದಾಪುರ, ಕೋನಪ್ಪನ ಅಗ್ರಹಾರ ಸೇರಿದಂತೆ ಹಲವು ಕಡೆಗಳಲ್ಲಿ ರಾತ್ರಿ ವೇಳೆ ಹಾಗೂ ಬೆಳಗಿನ ಜಾವ ಮನೆಯ ಕಿಟಕಿ ಹಾಗೂ ಬಾಗಿಲು ತೆರೆದಿರುವುದನ್ನು ಗಮನಿಸಿ ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗುತ್ತಿದ್ದ.

ಈ ಬಗ್ಗೆ ಹಲವು ಪೋಲಿಸ್ ಠಾಣೆಗಳಲ್ಲಿ ಕಳ್ಳತನದ ಪ್ರಕರಣಗಳ ದೂರು ದಾಖಲಾದ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೋಲಿಸರ ತಂಡ ವಿಶೇಷ ಕಾರ್ಯಚರಣೆ ನಡೆಸುವ ಮೂಲಕ ಆರೋಪಿ ನಾರಾಯಣಸ್ವಾಮಿಯನ್ನು ಬಂಧನ ಮಾಡಿ ಜೈಲಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

From Around the web