ಗಂಡನ ಕೊಂದ ಹೆಂಡತಿಗೆ ಜೀವಾವಧಿ ಶಿಕ್ಷೆ

 
ಗಂಡನ ಕೊಂದ ಹೆಂಡತಿಗೆ ಜೀವಾವಧಿ ಶಿಕ್ಷೆ

ದಾವಣಗೆರೆ: ಮದ್ಯ ವ್ಯಸನಿ ಗಂಡನನ್ನು ಕೊಂದು ಶೌಚಾಲಯದ ಗುಂಡಿಯಲ್ಲಿ ಹೂತ ಆರೋಪಿ ಹೆಂಡತಿಗೆ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 15 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.


ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದ ರೇಣುಕಾ(29) ಶಿಕ್ಷೆಗೆ ಗುರಿಯಾದ ಮಹಿಳೆ. ನಿತ್ಯ ಕುಡಿದು ಬಂದು ಹಣ ನೀಡುವಂತೆ ಗಂಡ ಬಂಗಿ ನರಸಿಂಹಪ್ಪ ಕಾಟ ಕೊಡುತ್ತಿದ್ದ. ಏನೂ ಕೆಲಸ ಮಾಡದೆ ಪ್ರತಿದಿನ ಮದ್ಯಪಾನ ಮಾಡಿ ಮನೆಗೆ ಬಂದು ಕಿರುಕುಳ ನೀಡುತ್ತಿದ್ದ.

ಕಳೆದ 2018 ರ ಏಪ್ರಿಲ್ 8 ರಾತ್ರಿ ಸಮಯದಲ್ಲಿ ಎಂದಿನಂತೆ ಕಂಠಪೂರ್ತಿ ಕುಡಿದು ಬಂದು ಹಣಕ್ಕಾಗಿ ಪೀಡಿಸಿ ಹೊಡೆಯಲು ಹೋದಾಗ ರೇಣುಕಾ ತನ್ನ ಗಂಡನ ಕುತ್ತಿಗೆಯನ್ನು ಕುಡುಗೋಲಿನಿಂದ ಕುತ್ತಿಗೆ ಕೊಯ್ದಿದ್ದಳು. ನಂತರ ಗಂಡನ ಶವವನ್ನು ಅಲ್ಲೆ ಪಕ್ಕದಲ್ಲಿರುವ ಶೌಚಾದ ಗುಂಡಿಯೊಳಗೆ ಎಸೆದು ಅದರ ಮೇಲೆ ಕಲ್ಲು ಚಪ್ಪಡಿಗಳನ್ನು ಹಾಕಿ ಕೊಲೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯುತ್ನ ನಡೆಸಿದ್ದರು. ಪ್ರಕರಣ ಬೆಳಕಿಗೆ ಬಂದ ನಂತರ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಹೊನ್ನಾಳಿ ಸಿಪಿಐ ಜೆ.ರಮೇಶ್ ಆರೋಪಿ ರೇಣುಕಮ್ಮ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ  ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಕೆ.ಬಿ.ಗೀತಾ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರೇಣುಕಾ ಅವರಿಗೆ ಜೀವಾವಧಿ ಶಿಕ್ಷೆ ಮತ್ತು 15 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಸ್.ವಿ.ಪಾಟೀಲ್ ವಾದ ಮಂಡಿಸಿದ್ದರು.

From Around the web