ಮಹಿಳೆಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

 
ಮಹಿಳೆಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಬೆಂಗಳೂರು: ಮಹಿಳೆಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧನ ಮಾಡುವಲ್ಲಿ ಪರಪ್ಪನ ಅಗ್ರಹಾರ ಪೋಲಿಸರು ಯಶಸ್ವಿಯಾಗಿದ್ದಾರೆ.

ಯಾದಗಿರಿ ಮೂಲದ ಮೆಹಬೂಬ್ ಬಂಧಿತ ಆರೋಪಿಯಾಗಿದ್ದು, ಪರಪ್ಪನ ಅಗ್ರಹಾರದ ಫಿರ್ಮಾ ಕೊಲೆಯಾದ ಮಹಿಳೆಯಾಗಿದ್ದಾಳೆ. ಕಳೆದ ಕೆಲ ವರ್ಷಗಳ ಹಿಂದೆ ಫಿರ್ಮಾಳ ಪತಿ ಸಾವನ್ನಪ್ಪಿದ್ದು ಇಬ್ಬರು ಮಕ್ಕಳ ಜೊತೆಗೆ ಪರಪ್ಪನ ಅಗ್ರಹಾರದಲ್ಲಿ ವಾಸ ಮಾಡುತ್ತಿದ್ದರು. ಫಿರ್ಮಾ ಕೆಲಸಕ್ಕೆ ಹೋಗಿ ಬರುವಾಗ ಯಾದಗಿರಿ ಮೂಲದ ಮೆಹಬೂಬ್ ಪರಿಚಯವಾಗಿ ಅದು ಅಕ್ರಮ ಸಂಬಂಧಕ್ಕೆ ತಿರುಗಿದ್ದು, ಆಗಾಗ್ಗೆ ಫಿರ್ಮಾ ಮನೆಗೆ ಮೆಹಬೂಬ್ ಬಂದು ಹೋಗುತ್ತಿದ್ದ.

ಇತ್ತೀಚೆಗೆ ಫಿರ್ಮಾಳ ಶೀಲ ಶಂಕಿಸಿ ಪದೇ ಪದೇ ಜಗಳವಾಡುತ್ತಿದ್ದು ಅದೇ ರೀತಿ ಕಳೆದ ಎರಡು ದಿನಗಳ ಹಿಂದೆ ಮನೆಗೆ ಬಂದ ಮೆಹಬೂಬ್ ಕೆಲಸ ಬಿಟ್ಟು‌ ತನ್ನ‌ ಹುಟ್ಟೂರು‌ ಯಾದಗಿರಿಗೆ ಬರುವಂತೆ ಪಿಡಿಸಿದ್ದ ಇದಕ್ಕೆ‌ ಫಿರ್ಮಾ ನಿರಾಕರಿಸಿದ ಹಿನ್ನೆಲೆ ಶುರುವಾದ ಜಗಳ ವಿಕೋಪಕ್ಕೆ ತಿರುಗಿ ಮನೆಯಲ್ಲಿದ್ದ ದೊಣ್ಣೆಯಿಂದ ಫಿರ್ಮಾ ತಲೆಗೆ ಹೊಡೆದು ಹತ್ಯೆ ಮಾಡಿ ಮೆಹಬೂಬ್ ತನ್ನ ಹುಟ್ಟೂರು ಯಾದಗಿರಿಗೆ ಹೋಗಿ ತಲೆಮರೆಸಿಕೊಂಡಿದ್ದ.

ಫಿರ್ಮಾ ಮಗ ಕೆಲಸ ಮುಗಿಸಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಪೋಲಿಸರು ದೂರು ದಾಖಲು ಮಾಡಿಕೊಂಡು ಪರಾರಿಯಾಗಿದ್ದ ಆರೋಪಿ ಮೆಹಬೂಬ್ ನನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

From Around the web