ಅಪ್ರಾಪ್ತೆಯರನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಇಬ್ಬರಿಗೆ 10 ವರ್ಷ ಕಠಿಣ ಶಿಕ್ಷೆ

 
ಅಪ್ರಾಪ್ತೆಯರನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಇಬ್ಬರಿಗೆ 10 ವರ್ಷ ಕಠಿಣ ಶಿಕ್ಷೆ

ಚಾಮರಾಜನಗರ: ಅಪ್ರಾಪ್ತೆಯರನ್ನು ಪ್ರೀತಿಸಿ ಮದುವೆಯಾಗಿದ್ದ ಇಬ್ಬರಿಗೆ ತಲಾ 10 ವರ್ಷ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ನ್ಯಾಯಾಲಯವು ಆದೇಶಿಸಿದೆ. ಜೊತೆಗೆ, 5.20 ಲಕ್ಷ ರೂ. ದಂಡವನ್ನು ತೆರಬೇಕು, ತಪ್ಪಿದ್ದಲ್ಲಿ 2 ವರ್ಷ ಸಾಧಾರಣ ಶಿಕ್ಷೆ ಎಂದು ಜಿಲ್ಲಾ ನ್ಯಾಯಾಧೀಶರಾದ ಸದಾಶಿವ ಎಸ್ ಸುಲ್ತಾನ್ ಪುರಿ ಸೂಚಿಸಿದ್ದಾರೆ.

ಹನೂರು ತಾಲೂಕಿನ ಪಿ.ಬಿ.ದೊಡ್ಡಿ ಗ್ರಾಮದ ಚೆಲುವ ಹಾಗೂ ಮುತ್ತುರಾಜ್ ಶಿಕ್ಷೆಗೊಳಗಾದ ಅಪರಾಧಿಗಳು‌.‌ ಅದೇ ಗ್ರಾಮದಲ್ಲಿ ವಾಸವಿದ್ದ ಇಬ್ಬರು ಬಾಲಕಿಯರನ್ನು 2016ರಲ್ಲಿ ಇವರಿಬ್ಬರು ಪ್ರೀತಿಸಿ, ಮನೆಯಿಂದ ತಮಿಳುನಾಡಿಗೆ ಕರೆದೊಯ್ದು ಮದುವೆಯಾಗಿ ಕೂಲಿ ಕೆಲಸ ಮಾಡುತ್ತಿದ್ದರು.ಬಳಿಕ, ಪೊಲೀಸರು ಬಾಲಕಿಯರನ್ನು ಪತ್ತೆಹಚ್ಚಿ ಕರೆತಂದಿದ್ದರು.

ಬಳಿಕ, ರಾಮಾಪುರ ಠಾಣೆಯಲ್ಲಿ  ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅಪ್ರಾಪ್ತೆಯರನ್ನು ಮದುವೆಯಾಗಿ ಲೈಂಗಿಕ ಕ್ರಿಯೆ ನಡೆಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಇಂದು ನ್ಯಾಯಾಧೀಶರು ಶಿಕ್ಷೆ ಪ್ರಕಟಿಸಿ ಆದೇಶಿಸಿದ್ದಾರೆ‌. ತಲಾ 5.20 ಲಕ್ಷ ರೂ. ದಂಡದ ಹಣವಮ್ನ ಬಾಲಕಿಯರಿಗೆ ಪರಿಹಾರ ರೂಪದಲ್ಲಿ ನೀಡಬೇಕೆಂದು ಆದೇಶಿಸಿದ್ದು, ವಿಶೇಷ ಸರ್ಕಾರಿ ಅಭಿಯೋಜಕರಾಗಿ ಯೋಗೇಶ್ ವಾದ ಮಂಡಿಸಿದ್ದರು.

From Around the web