2.35 ಲಕ್ಷ ಮೌಲ್ಯದ ಗಾಂಜಾ ವಶ: ಇಬ್ಬರ ಬಂಧನ

 
2.35 ಲಕ್ಷ ಮೌಲ್ಯದ ಗಾಂಜಾ ವಶ: ಇಬ್ಬರ ಬಂಧನ

ದಾವಣಗೆರೆ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಇಲ್ಲಿನ ಸಿಎನ್ ಅಪರಾಧ ಪೊಲೀಸರು, ಸುಮಾರು 2.35 ಲಕ್ಷ ಮೌಲ್ಯದ 5 ಕೆ.ಜಿ 778 ಗ್ರಾಂ ಗಾಂಜಾ ಮತ್ತು ಗಾಂಜಾ ಮಾರಾಟದಿಂದ ಬಂದ 800 ರೂ. ನಗದು ವಶಪಡಿಸಿ ಕೊಂಡಿದ್ದಾರೆ.

ಭದ್ರಾವತಿ ತಾಲ್ಲೂಕು ಹೊಸಬುಳ್ಳಾಪುರ ಗ್ರಾಮದ ಸಿ.ಆರ್, ಅರವಿಂದ್ ನ್ಯೂ ಟೌನ್‌ ಎ.ಅನಿಲ್ ಕುಮಾರ್ ಬಂಧಿತರು. ಎಸ್ಪಿ ಹನುಮಂತರಾಯ, ಎಎಸ್ಪಿ ಎಂ. ರಾಜೀವ್ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ.

ಡಿಸಿಆರ್ ಬಿ ಘಟಕದ ಪೊಲೀಸ್ ಉಪಾಧೀಕ್ಷಕ ಬಿ.ಎಸ್.ಬಸವರಾಜ್ ನೇತೃತ್ವದಲ್ಲಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಬಿ.ವಿ. ಗಿರೀಶ್ ಹಾಗೂ ಸಿಬ್ಬಂದಿ ಪಿ. ನಾಗಾರಾಜ್, ಲೋಹಿತ, ನಾಗರಾಜ್, ಮಲ್ಲಿಕಾರ್ಜುನ ಒಳಗೊಂಡ ತಂಡವು ಹರಿಹರ ತಾಲೂಕಿನ ಹರಿಹರ-ಶಿವಮೊಗ್ಗ ರಸ್ತೆಯ ಪಕ್ಕದ ಪಿಎಸ್ ಕೆ ಫಾರ್ಮ್ ಹತ್ತಿರ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದೆ. ಈ ಸಂಬಂಧ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

From Around the web