ಪೊಲೀಸರಿಂದ ಹೆಲ್ಮೆಟ್ ಪಡೆದು ಸೆಲ್ಫಿ ತೆಗೆದುಕೊಂಡ ಬೈಕ್ ಸವಾರ

 
ಪೊಲೀಸರಿಂದ ಹೆಲ್ಮೆಟ್ ಪಡೆದು ಸೆಲ್ಫಿ ತೆಗೆದುಕೊಂಡ ಬೈಕ್ ಸವಾರ

ಚಾಮರಾಜನಗರ: ಹೆಲ್ಮೆಟ್ ರಹಿತ ಸವಾರನೊಬ್ಬ ಪೊಲೀಸರಿಂದ ಹೆಲ್ಮೆಟ್ ಪಡೆಯುವ ವೇಳೆ ಸೆಲ್ಫಿ ತೆಗೆದುಕೊಂಡು ಪೊಲೀಸರಿಗೆ ಅಚ್ಚರಿ ಮೂಡಿಸಿದ ಅಪರೂಪ ಘಟನೆ ಇಂದು ಚಾಮರಾಜನಗರದಲ್ಲಿ ನಡೆಯಿತು.

ಹೌದು. ಇಂದು ಚಾಮರಾಜನಗರ ಪೊಲೀಸ್ ಇಲಾಖೆ ವತಿಯಿಂದ ಹೆಲ್ಮೆಟ್ ಜಾಗೃತಿ ಅಭಿಯಾನಕ್ಕಾಗಿ ಬೈಕ್ ಜಾಥಾ ನಡೆಯುತ್ತಿದ್ದ ವೇಳೆ ಹೆಲ್ಮೆಟ್ ರಹಿತ ಸವಾರನೊಬ್ಬನನ್ನು ಹಿಡಿದ ಪೊಲೀಸರು, ಆತನಿಗೆ ದಂಡ ವಿಧಿಸುವ ಬದಲು ದಂಡವಾಗಿ ವಿಧಿಸುವ 500ರೂ.ಜೊತೆಗೆ 200ರೂ.ಗಳನ್ನು ಹೆಚ್ಚುವರಿಯಾಗಿ ಕಟ್ಟಿಸಿಕೊಂಡು ಅಂಗಡಿಗಳಲ್ಲಿ 1200ರೂ.ಮೌಲ್ಯವಿರುವ ಹೆಲ್ಮೆಟ್ ಅನ್ನು ನೀಡಿದರು.

ಡಿವೈಎಸ್ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಅವರು ಹೆಲ್ಮೆಟ್ ನೀಡಲು ಮುಂದಾಗಿತ್ತಿದ್ದಂತೆ ಹೆಲ್ಮೆಟ್ ರಹಿತ ಯುವ ಸವಾರನೊಬ್ಬ ಹೆಲ್ಮೆಟ್ ಪಡೆಯುವ ದೃಶ್ಯವನ್ನು ತನ್ನ ಮೊಬೈಲ್ ಮೂಲಕ ಸೆಲ್ಫಿ ತೆಗೆದು ಸಂಭ್ರಮಿಸಿದರೆ, ಪೊಲೀಸರು ಅಚ್ಚರಿಗೊಳಗಾದರು.

From Around the web