ಆನೇಕಲ್ ಉಪವಿಭಾಗದ ವತಿಯಿಂದ ಪೋಲೀಸ್ ಪೆರೇಡ್

 
ಆನೇಕಲ್ ಉಪವಿಭಾಗದ ವತಿಯಿಂದ ಪೋಲೀಸ್ ಪೆರೇಡ್

ಆನೇಕಲ್: ಅಪರಾಧ ಪ್ರಕರಣಗಳು ನಡೆದಾಗ‌ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕೆಂದು ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮೀ ಗಣೇಶ್ ತಿಳಿಸಿದರು. 

ಬೆಂಗಳೂರು ಹೊರವಲಯ ಆನೇಕಲ್ ಉಪವಿಭಾಗದ ಪೋಲಿಸರ ವತಿಯಿಂದ ಆನೇಕಲ್ ಪಟ್ಟಣದ ಎಎಸ್ಬಿ ಶಾಲಾ ಮೈದಾನದಲ್ಲಿ ಆಯೋಜನೆ ಮಾಡಿದ್ದ ಪೋಲಿಸ್ ಪೆರೇಡ್ ನಲ್ಲಿ ನೂರಾರು ಜನ ಪೋಲಿಸರು ಭಾಗವಹಿಸಿದ್ದರು. ಉಪವಿಭಾಗದ ಡಿವೈಎಸ್ಪಿ ಮಹದೇವಪ್ಪ ಅವರ‌ ನಾಯಕತ್ವದಲ್ಲಿ 7 ಬೆಟಾಲಿಯನ್‌ ಗಳಾಗಿ ಪೋಲಿಸರ ತಂಡಗಳನ್ನು ವಿಂಗಡಿಸಿ ಅಚ್ಚುಕಟ್ಟಾಗಿ ಮಾರ್ಚ್ ಮಾಡುತ್ತ ಅಧ್ಯಕ್ಷತೆ ವಹಿಸಿದ್ದ ಅಡಿಷನಲ್ ಎಸ್ಪಿ ಲಕ್ಷ್ಮೀ ಗಣೇಶ್ ಅವರಿಗೆ ಗೌರವ ಸಮರ್ಪಣೆ ಸಲ್ಲಿಸಿದರು. ನೂರಾರು ಮಂದಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪೋಲೀಸರ ಶಿಸ್ತಿನ ಕವಾಯತನ್ನು ನೋಡಲು ಭಾಗವಹಿಸಿದ್ದರು. 

ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮೀ ಗಣೇಶ್ ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ ದೇಹದಂಡನೆ ಹಾಗೂ ಕಮ್ಯಾಂಡ್ ಹಾಗೂ ಕಂಟ್ರೋಲ್ ನಮ್ಮ ಪ್ರಮುಖ ಉದ್ದೇಶವಾಗಿದೆ. ಯಾವುದೇ ಕೆಲಸಕ್ಕೆ ಹಾಗು ಅಹಿತಕರ ಘಟನೆಗಳು ನಡೆದಾಗ ನಾವು ಸದಾ ಸನ್ನದ್ಧ ರಾಗಿರುತ್ತೇವೆ ಎಂಬುದು ಪ್ರಮುಖ ಉದ್ದೇಶವಾಗಿದೆ. ಇದೇ ಸಮಯದಲ್ಲಿ ಸ್ಫೋಟಕ ವಸ್ತುಗಳ ವಿಷಯದಲ್ಲಿ‌ ಈಗಾಗಲೇ ಎಲ್ಲಾ ಪೊಲೀಸ್ ಸಿಬ್ಬಂದಿಗೂ ಸಹ ವಿಷೇಶ ಸೂಚನೆ ಹಾಗೂ ಮಾಹಿತಿಗಳನ್ನು ನೀಡಲಾಗಿದೆ ಜೊತೆಗೆ ಮಾದಕ ವಸ್ತುಗಳ ವಿಷಯದಲ್ಲಿಯು ಸಹ ಕಟ್ಟುನಿಟ್ಟಾಗಿ ಕ್ರಮ ವಹಿಸುವಂತೆ ಸೂಚಿಸಲಾಗಿದೆ. 

ಸಾರ್ವಜನಿಕ ವಲಯದಲ್ಲಿ ರೌಡಿಸಂ ಮಾಡುತ್ತ ಜನಸಾಮಾನ್ಯರಿಗೆ ತೊಂದರೆ ನೀಡುವಂತವರ ವಿರುದ್ಧ ಕಠಿಣ ಕ್ರಮ ಜರುಗಿಸಿ ಅಪರಾಧ ಕೃತ್ಯಗಳನ್ನು ಮಟ್ಟಹಾಕಬೇಕು. ಸಾರ್ವಜನಿಕರು ಸಮಸ್ಯೆ ಎಂದು ಠಾಣೆಗೆ ಬಂದ್ರೆ ಅವರ ಜೊತೆ ಪೋಲಿಸರು ಸ್ನೇಹ ಪೂರ್ವಕವಾಗಿ ಮಾತನಾಡಿ ಅವರ ಸಮಸ್ಯೆಯನ್ನು ಬಗೆಹರಿಸುವಂತಹ ಕೆಲಸವನ್ನು ಪ್ರತಿಯೊರ್ವ ಪೋಲಿಸರು ಸಹ ಮಾಡಬೇಕೆಂದು ಕಿವಿ ಮಾತು ಹೇಳಿದರು.

From Around the web