ಬಂಗಾರದ ಮಾಲೀಕನಿಗೆ ವಂಚಿಸಿದವನ ಬಂಧನ

 
ಬಂಗಾರದ ಮಾಲೀಕನಿಗೆ ವಂಚಿಸಿದವನ ಬಂಧನ

ದಾವಣಗೆರೆ: ಬಂಗಾರದ ಆಭರಣಗಳನ್ನು ತಯಾರಿಸಿಕೊಡುವುದಾಗಿ ಹೇಳಿ ಇಲ್ಲಿನ ಭರತ್ ಜ್ಯುವೆಲ್ಲರಿ ಮಾಲೀಕ ವಿಜಯ್‌ಕುಮಾರ್ ಅವರಿಗೆ ₹12 ಲಕ್ಷ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಒಬ್ಬನನ್ನು ಬಸವನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಗೌರ್ ಅದಕ್ ಅಲಿಯಸ್ ಸಮೂಲ್ ಬಿನ್ ಶಕ್ತಿ ಅದಕ್ ( 37) ಬಂಧಿತ. ಈತ ಬಂಗಾರದ ಆಭರಣ ತಯಾರಿಸಿಕೊಡುವುದಾಗಿ ಹೇಳಿ ವಿಜಯ್‌ಕುಮಾರ್ ಅವರಿಂದ 450 ಗ್ರಾಂ ಬಂಗಾರವನ್ನು ತೆಗೆದುಕೊಂಡು ಹೋಗಿದ್ದ. ಆರೋಪಿಯನ್ನು ಬಂಧಿಸಿ ಬಂಗಾರವನ್ನು ವಶಪಡಿಸಿಕೊಂಡಿದ್ದು, ಅರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ದಾಳಿಯಲ್ಲಿ ಪಾಲ್ಗೊಂಡಿದ್ದ ಬಸವನಗರ ಪೊಲೀಸ್ ಠಾಣೆಯ ಪಿಐ ನಾಗಪ್ಪ ಬಂಕಾಳಿ, ಪಿಎಸ್ಐ ಶೀಲಾ ಹೊಂಗಲ್ ಹಾಗೂ ಸಿಬ್ಬಂದಿ ಶಿವಪ್ಪ.ಜಿ.ಆರ್, ಫಕೃದ್ದೀನ್, ಪ್ರಭಕಾರ, ಮಹಮ್ಮದ್ ರಫಿ, ಮಹಮ್ಮದ್ ಯುಸೂಫ್, ವಿಶ್ವನಾಥ್ ಗಡ್ಡಿ ಅವರನ್ನು ಎಸ್‌ಪಿ ಹನುಮಂತರಾಯ, ಎಎಸ್‌ಪಿ ಎಂ.ರಾಜೀವ್ ಹಾಗೂ ಡಿವೈಎಸ್‌ಪಿ ನಾಗೇಶ್ ಐತಾಳ್ ಅವರು ಅಭಿನಂದಿಸಿದ್ದಾರೆ.

From Around the web