ಮಹಾಶಿವರಾತ್ರಿ ಹಿನ್ನೆಲೆ ಸೋಮೇಶ್ವರ ದೇವಾಲಯಕ್ಕೆ ಹರಿದು ಬಂದ ಜನಸಾಗರ

 
ಮಹಾಶಿವರಾತ್ರಿ ಹಿನ್ನೆಲೆ ಸೋಮೇಶ್ವರ ದೇವಾಲಯಕ್ಕೆ ಹರಿದು ಬಂದ ಜನಸಾಗರ

ಕೋಲಾರ:  ಶಿಲ್ಪ ಕಲೆ ನಾಡು ಎಂದು ಪ್ರಖ್ಯಾತಿ ಪಡೆದಿರುವ ಬೇಲೂರು ಹಳೇಬೀಡಿನ ಶಿಲ್ಪಕಲೆಯನ್ನು ನೆನಪಿಸುವ ಚೋಳರ ಕಾಲದಲ್ಲಿ ನಿರ್ಮಾಣವಾದ ಕೋಲಾರ ನಗರದ  ಸೋಮೇಶ್ವರ ದೇವಾಲಯದಲ್ಲಿ ಇಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ  ಈಶ್ವರನಿಗೆ ಅಭಿಷೇಕ, ಅರ್ಚನೆ  ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.

ಸೋಮೇಶ್ವರನಿಗೆ ಬಿಲ್ವಪತ್ರೆಯಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಭಕ್ತರು ತಂಡೋಪ ತಂಡವಾಗಿ ದೇವರ ದರ್ಶನಕ್ಕೆ ಆಗಮಿಸಿ ದೇವ ದರ್ಶನ ಪಡೆದು ಪುನೀತರಾದ್ರು. ಇನ್ನು ಮಹಿಳೆಯರು ಶಿವನ ಸ್ಮರಣೆ ಮಾಡುತ್ತಾ, ಭಕ್ತಿ ಸುಧೆಗೆ ಪಾತ್ರರಾದರು ದೇವಾಲಯನ್ನು ವಿಶೇಷವಾಗಿ ಅಲಂಕರಿಸಿಲಾಗಿತ್ತು.

From Around the web