ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು : ಎಸ್ಪಿ ದಿವ್ಯಾ ಸಾರಾ ಥಾಮಸ್

 
ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು : ಎಸ್ಪಿ ದಿವ್ಯಾ ಸಾರಾ ಥಾಮಸ್

ಚಾಮರಾಜನಗರ: ಪೊಲೀಸ್ ಇಲಾಖೆ ವತಿಯಿಂದ ಇಂದು ಚಾಮರಾಜನಗರದಲ್ಲಿ ಹೆಲ್ಮೆಟ್ ಜಾಗೃತಿ ಅಭಿಯಾನಕ್ಕಾಗಿ ಬೈಕ್ ಜಾಥಾ ನಡೆಯಿತು.

ನಗರದ ಜಿಲ್ಲಾ ಪೊಲೀಸ್ ಕಚೇರಿ ಮುಂಬಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೆಲ್ಮೆಟ್ ಜಾಗೃತಿ ಅಭಿಯಾನಕ್ಕಾಗಿ ಬೈಕ್ ಜಾಥಾಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಹಾಗೂ ಬಿಆರ್ಟಿ ಹುಲಿಯೋಜನೆ ನಿರ್ದೇಶಕ ಸಂತೋಷ್ ಕುಮಾರ್ ಹಸಿರು ನಿಶಾನೆ ತೋರಿದರು.

ಹೆಲ್ಮೆಟ್ ಧರಿಸಿ ಬೈಕ್ ಮೂಲಕ ಜಾಥಾ ಹೊರಟ ಸುಮಾರು 50ಕ್ಕೂ ಹೆಚ್ಚು ಪೊಲೀಸರು ನಗರದ ವಿವಿಧ ರಸ್ತೆಯಲ್ಲಿ ಸಂಚರಿಸಿ ಹೆಲ್ಮೆಟ್ ಕುರಿತು  ಮೂಡಿಸಿದರು. ಇದೇ ಸಂದರ್ಭದಲ್ಲಿ ಪೊಲೀಸರು ಕೆಲವು ಹೆಲ್ಮೆಟ್ ರಹಿತರನ್ನು ಹಿಡಿದು ಅವರಿಗೆ ದಂಡದ ಬದಲಾಗಿ ಹೆಲ್ಮೆಟ್ ನೀಡಿದರು.

ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಥಾಮಸ್, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇಂದು  ಹೆಲ್ಮೆಟ್ ರಹಿತರನ್ನು ಹಿಡಿದು ಅವರಿಗೆ ದಂಡ ವಿಧಿಸುವ ಬದಲು ದಂಡವಾಗಿ ವಿಧಿಸುವ 500 ರೂ.ಜೊತೆಗೆ 200 ರೂ.ಗಳನ್ನು ಹೆಚ್ಚುವರಿಯಾಗಿ ಕಟ್ಟಿಸಿಕೊಂಡು ಅಂಗಡಿಗಳಲ್ಲಿ 1200 ರೂ.ಮೌಲ್ಯವಿರುವ ಹೆಲ್ಮೆಟ್ ಗಳನ್ನು ನೀಡಲಾಗುತ್ತಿದೆ ಎಂದ ಅವರು, ಪ್ರತಿಯೊಬ್ಬರು ತಮ್ಮ ಪ್ರಾಣ ರಕ್ಷಣೆಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಸಲಹೆ ನೀಡಿದರು.

From Around the web