ಗ್ರಾಮದ ಮುಖ್ಯ ರಸ್ತೆ ಕಾಮಗಾರಿ ವಿಳಂಬ ಹಿನ್ನೆಲೆ ಬಿಎಸ್ಪಿ ಪಕ್ಷದಿಂದ ರಸ್ತೆಯಲ್ಲಿ ಕುಳಿತು ವಿನೂತನ ಪ್ರತಿಭಟನೆ

 
ಗ್ರಾಮದ ಮುಖ್ಯ ರಸ್ತೆ ಕಾಮಗಾರಿ ವಿಳಂಬ ಹಿನ್ನೆಲೆ ಬಿಎಸ್ಪಿ ಪಕ್ಷದಿಂದ ರಸ್ತೆಯಲ್ಲಿ ಕುಳಿತು ವಿನೂತನ ಪ್ರತಿಭಟನೆ

ಆನೇಕಲ್: ಗ್ರಾಮದ ಮುಖ್ಯ ರಸ್ತೆ ಕಾಮಗಾರಿ ವಿಳಂಬವಾಗುತ್ತಿರುವುದನ್ನು ಖಂಡಿಸಿ ಇಂದು ಬಿಎಸ್ಪಿ ಪಕ್ಷದಿಂದ ರಸ್ತೆಯಲ್ಲಿ ಕುಳಿತು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಆನೇಕಲ್ ತಾಲ್ಲೂಕಿನ ಮುತ್ತನಲ್ಲೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಸಾಕಷ್ಟು ವರ್ಷಗಳಿಂದ ಹದಗೆಟ್ಟು ಜನರು ಓಡಾಟ ನಡೆಸಲಾಗದೆ ಪರದಾಟ ನಡೆಸುತ್ತಿದ್ದಾರೆ. ಈ ರಸ್ತೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಸಬೇಕೆಂದು ಒತ್ತಾಯಿಸಿ ಇಂದು ಬಿಎಸ್ಪಿಯ ತಾಲೂಕು ಅಧ್ಯಕ್ಷರಾದ ಚಿನ್ನಪ್ಪನವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಗ್ರಾಮಸ್ಥರು ಸಹ ಭಾಗವಹಿಸಿ ಗುತ್ತಿಗೆದಾರರ ವಿರುದ್ಧ ಆಕ್ರೋಶವನ್ನು ಹೊರಹಾಕಿದರು.

 ಪ್ರತಿದಿನ ಈ ರಸ್ತೆಯಲ್ಲಿ ಓಡಾಡುವ ಗ್ರಾಮಸ್ಥರು ರಸ್ತೆಯ ಧೂಳಿನಿಂದ ಹೈರಾಣಾಗಿದ್ದಾರೆ. ಮುಂಜಾನೆ ಶಾಲೆಗಳಿಗೆ ಹೋಗುವ ಮಕ್ಕಳು ಕೆಲಸಕ್ಕೆ ಹೋಗುವಂತವರು ಈ ಹದಗೆಟ್ಟ ಮುಖ್ಯ ರಸ್ತೆಯಲ್ಲಿ ಹೋಗಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಗ್ರಾಮದ ಜನರು ಈ ಧೂಳಿನಿಂದ ಸಾಕಷ್ಟು ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಈಗಾಗಲೇ ಮುಖ್ಯರಸ್ತೆಯ ಕಾಮಗಾರಿಗೆ ವಿಶೇಷ ಅನುದಾನದಡಿಯಲ್ಲಿ 1.45 ಕೋಟಿ ಹಣ ಮಂಜೂರಾಗಿದ್ದರು ಸಹ ಗುತ್ತಿಗೆದಾರರು ರಾಜಕೀಯ ಒತ್ತಡಕ್ಕೆ ಮಣಿದು ಮುಖ್ಯ ರಸ್ತೆಯ ಕಾಮಗಾರಿಯನ್ನು ವಿಳಂಬ ಮಾಡುತ್ತಿದ್ದಾರೆ.

ಇನ್ನು ಕೇವಲ 15 ದಿನಗಳ ಒಳಗಾಗಿ ಆರ್ಥಿಕ ವರ್ಷ ಅಂತ್ಯವಾಗುತ್ತಿದ್ದು ಅಷ್ಟರೊಳಗಾಗಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು. ಇಲ್ಲವಾದರೆ ರಸ್ತೆಗೆ ಬಂದಿರುವ ಅನುದಾನ ವಾಪಸ್ಸು ಸರ್ಕಾರಕ್ಕೆ ಹೋಗುತ್ತದೆ ಹಾಗಾಗಿ ಟೆಂಡರ್ ಆಗಿರುವ ಮುಖ್ಯ ರಸ್ತೆಯ ಕಾಮಗಾರಿ ಯನ್ನು ಆದಷ್ಟು ಬೇಗ ಮುಗಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಬಿಎಸ್ಪಿ ತಾಲೂಕು ಅಧ್ಯಕ್ಷ ವೈ. ಚಿನ್ನಪ್ಪ ಕಿಡಿಕಾರಿದರು.

From Around the web