ಹರಳುಕೋಟೆ ಆಂಜನೇಯ ದೇಗುಲಕ್ಕೆ ಸಿಜೆಐ ಬೊಬ್ಡೆ ಭೇಟಿ : ಪೊಲೀಸ್ ಬಿಗಿ ಬಂದೋಬಸ್ತ್

 
ಹರಳುಕೋಟೆ ಆಂಜನೇಯ ದೇಗುಲಕ್ಕೆ ಸಿಜೆಐ ಬೊಬ್ಡೆ ಭೇಟಿ : ಪೊಲೀಸ್ ಬಿಗಿ ಬಂದೋಬಸ್ತ್

ಚಾಮರಾಜನಗರ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಚಾಮರಾಜನಗರದ ರಾಮಸಮುದ್ರದಲ್ಲಿರುವ ಹರಳುಕೋಟೆ ಆಂಜನೇಯ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದಾರೆ.

ಬೆಂಗಳೂರಿನಿಂದ ಮೈಸೂರಿಗೆ ವಾಯು ಮಾರ್ಗದ ಮೂಲಕ ಹಾಗೂ ಮೈಸೂರಿನಿಂದ ಚಾಮರಾಜನಗರಕ್ಕೆ ಝೀರೋ ಟ್ರಾಫಿಕ್ ನಲ್ಲಿ ಬೋಬ್ಡೆ ಹಾಗೂ ಅವರ ಕುಟುಂಬ ವರ್ಗ ಹರಳುಕೋಟೆ ಆಂಜನೇಯ ದೇಗುಲಕ್ಕೆ ಭೇಟಿಯಿತ್ತು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಚಾಮರಾಜನಗರದ ಉದ್ಯಮಿಯೊಬ್ಬರ ಮನೆಯಲ್ಲಿ ಮಧ್ಯಾಹ್ನದ ಭೋಜನ ಸೇವಿಸಿ ಮೈಸೂರಿಗೆ ತೆರಳಲಿದ್ದು, ಎರಡು ದಿನ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿದುಬಂದಿದೆ. ಬೊಬ್ಡೆ ಅವರ ಖಾಸಗಿ ಕಾರ್ಯಕ್ರಮವಾದ್ದರಿಂದ ಮಾಧ್ಯಮದವರಿಗೆ ಹಾಗೂ ಸಾರ್ವಜನಿಕರಿಗೆ  ಒಂದು ಕಿ.ಮೀ. ದೂರದಿಂದಲೇ ನಿರ್ಬಂಧ ವಿಧಿಸಲಾಗಿತ್ತು. 

ಬೊಬ್ಡೆ ಅವರ ಖಾಸಗಿ ಭೇಟಿಯನ್ನು ಭದ್ರತಾ ದೃಷ್ಟಿಯಿಂದ ತಿಳಿಸದಿದ್ದರಿಂದ ದೇವಾಲಯಕ್ಕೆ ಬರುವ ಭಕ್ತರು ನಿರಾಶೆಯಿಂದ ಹಿಂತಿರುಗ ಬೇಕಾಯಿತು.

From Around the web