ಜಲಜೀವನ ಮಿಷನ್ ಅನುಷ್ಠಾನಗೊಳಿಸಲು ಗ್ರಾ.ಪಂ.ಜನಪ್ರತಿನಿಧಿಗಳ ಸಹಕಾರ ಅತ್ಯಗತ್ಯ : ಜಿ.ಪಂ.ಸಿಇಓ

 
ಜಲಜೀವನ ಮಿಷನ್ ಅನುಷ್ಠಾನಗೊಳಿಸಲು ಗ್ರಾ.ಪಂ.ಜನಪ್ರತಿನಿಧಿಗಳ ಸಹಕಾರ ಅತ್ಯಗತ್ಯ : ಜಿ.ಪಂ.ಸಿಇಓ

ಚಾಮರಾಜನಗರ: ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನಗೊಳಿಸಲು ಗ್ರಾಮ ಪಂಚಾಯತಿ ಜನಪ್ರತಿನಿಧಿಗಳ ಸಹಕಾರ ಅತ್ಯಗತ್ಯ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಭೋಯರ್ ಹರ್ಷಲ್ ನಾರಾಯಣ ರಾವ್ ಹೇಳಿದರು.

ಚಾಮರಾಜನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯತ್, ಕೈಂಡ್ ಹಾರ್ಟ್ ಸಂಸ್ಥೆಯ ಸಹಭಾಗಿತ್ವದಲ್ಲಿ ಸ್ವಚ್ಛ ಭಾರತ ಮಿಷನ್‌ (ಗ್ರಾಮೀಣ) ಜಲಜೀವನ ಮಿಷನ್ (ಜೆಜೆಎಂ) ಹೆಚ್ ಆರ್ ಡಿ ಕಾರ್ಯಕ್ರಮದಡಿ ಪಂಚಾಯಿತಿ ಸದಸ್ಯರ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮೈಸೂರು ಜಿಲ್ಲೆಗಿಂತ ಚಾಮರಾಜನಗರ ಜಿಲ್ಲೆಯಲ್ಲಿ ಜಲಜೀವನ ಮಿಷನ್ ಅನ್ನು ಒಂದಯ ಉತ್ತಮ ಯೋಜನೆಯನ್ನಾಗಿ ಕೊಡಬೇಕು ಎಂದು ಚಿಂತಿಸಲಾಗಿದೆ. ಗ್ರಾಮ ಪಂಚಾಯತಿ ಸದಸ್ಯರು ತೀರ್ಮಾನ ಮಾಡಿದರೆ ಪಂಚಾಯತಿಯಲ್ಲಿ ಸಾಕಷ್ಟು ಅಭಿವೃದ್ಧಿ, ಒಳ್ಳೆಯ ಸಾಧನೆ ಮಾಡಬಹುದು. ತೆರಿಗೆ ಸಂಗ್ರಹ ಮಾಡಿದರೆ ಹೆಚ್ಚಿನ ಅಭಿವೃದ್ಧಿ ಪಡಿಸಬಹುದು. ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು  ಗ್ರಾಮಗಳಲ್ಲಿ ನೀರು ಪೋಲಾಗದಂತೆ ಜಾಗೃತಿ ಮೂಡಿಸಬೇಕು ಎಂದರು.

From Around the web