ಮಾರ್ಟಳ್ಳಿ ಪಿಯು ವಿದ್ಯಾರ್ಥಿಗೆ ಕೋವಿಡ್ ಪಾಸಿಟಿವ್ : ಕಾಲೇಜಿಗೆ ರಜೆ ಘೋಷಣೆ, ಸ್ಯಾನಿಟೈಸ್

 
ಮಾರ್ಟಳ್ಳಿ ಪಿಯು ವಿದ್ಯಾರ್ಥಿಗೆ ಕೋವಿಡ್ ಪಾಸಿಟಿವ್ : ಕಾಲೇಜಿಗೆ ರಜೆ ಘೋಷಣೆ, ಸ್ಯಾನಿಟೈಸ್

ಚಾಮರಾಜನಗರ: ಪ್ರಥಮ ಪಿಯು ವಿದ್ಯಾರ್ಥಿಗೆ ಕೋವಿಡ್ ಸೋಂಕು ತಗುಲಿದ್ದರಿಂದ ಕಾಲೇಜಿಗೆ ರಜೆ ಘೋಷಿಸಿರುವ ಘಟನೆ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಾರ್ಟಳ್ಳಿಯ ಸೇಂಟ್ ಮೇರೀಸ್ ಸಂಯುಕ್ತ‌ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಗೆ ಸೋಂಕು ತಗುಲಿರುವುದು ಇಂದು ಗೊತ್ತಾದ ಹಿನ್ನೆಲೆಯಲ್ಲಿ ಕಾಲೇಜಿಗೆ ರಜೆ ಘೋಷಿಸಿ ತರಗತಿ ಕೋಣೆಗಳನ್ನು ಸ್ಯಾನೀಟೈಸ್ ಮಾಡಲು ಸೂಚಿಸಲಾಗಿದೆ.

ಈ ಕಾಲೇಜಿನಲ್ಲಿ ಪ್ರಥಮ ಪಿಯುನಲ್ಲಿ ವಿಭಾಗದಲ್ಲಿ ಒಟ್ಟು 142 ವಿದ್ಯಾರ್ಥಿಗಳು, ದ್ವಿತೀಯ ಪಿಯುಸಿ ಯಲ್ಲಿ 91 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸದ್ಯ, ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.

From Around the web