ಸರ್ಕಾರ, ಅಧಿಕಾರಿಗಳ ವಿರುದ್ದ ಕ್ರಷರ್ ಮಾಲೀಕರು, ಗುತ್ತಿಗೆದಾರರು ಕಿಡಿ

 
ಸರ್ಕಾರ, ಅಧಿಕಾರಿಗಳ ವಿರುದ್ದ ಕ್ರಷರ್ ಮಾಲೀಕರು, ಗುತ್ತಿಗೆದಾರರು ಕಿಡಿ

ಕೋಲಾರ: ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಜಿಲೆಟಿನ್ ದುರಂತದ ನಂತರ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಈಗಾಗಲೇ ಜಿಲೆಟಿನ್ ಕಡ್ಡಿ ಬಳಸದಂತೆ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಹಿನ್ನಲೆ ಕೋಲಾರ ಜಿಲ್ಲೆಯ 33 ಕ್ರಷರ್‍ಗಳ ಕಾರ್ಯ ನಿರ್ವಹಣೆ ಸ್ತಗಿತವಾಗಿದ್ದು, ಇದರ ಪರಿಣಾಮವಾಗಿ ಸರ್ಕಾರಿ ಕಾಮಗಾರಿಗಳಿಗೆ ಹೊಡೆತ ಬಿದ್ದಿದೆ. ರಸ್ತೆ, ಚರಂಡಿ, ಕಟ್ಟಡಗಳ ಕಾಮಗಾರಿಗಳನ್ನ ನಡೆಸ್ತಿರುವ ಗುತ್ತಿಗೆದಾರರಿಗೆ ಈಗ ಸಮಯಕ್ಕೆ, ಜೆಲ್ಲಿ, ಎಮ್ ಸ್ಯಾಂಡ್ ಸಿಗುತ್ತಿಲ್ಲ, ಬಂಡೆ ಸಿಡಿಸಿದಂತೆ ಸರ್ಕಾರ ಆದೇಶ ಹಿನ್ನಲೆ, ಕಲ್ಲು ಇಲ್ಲದೆ ಕ್ರಷರ್‍ಗಳನ್ನ ನಡೆಸದೆ ಮಾಲೀಕರು ಸುಮ್ಮನಾಗಿದ್ದಾರೆ.

ಇದನ್ನೆ ಬಂಡವಾಳ ಮಾಡಿಕೊಂಡಿರೊ ನೆರೆಯ ಆಂಧ್ರ ಮತ್ತು ತಮಿಳುನಾಡು ಕ್ರಷರ್ ಮಾಲೀಕರು ದುಪ್ಪಟ್ಟು ಹಣ ಪೀಕಲು ಶುರು ಮಾಡಿದ್ದು, ಗುತ್ತಿಗೆದಾರರು ಕೆಲಸವನ್ನ ನಿಲ್ಲಿಸಿದ್ದಾರೆ. ಕೋಲಾರದಲ್ಲಿ ಒಂದು ಅಡಿ ಜೆಲ್ಲಿಗೆ 23 ರೂಪಾಯಿಯಂತೆ ಬೆಲೆಯಿದೆ. ಆದರೆ ಕ್ರಷರ್‍ಗಳು ಬಂದ್ ಆಗಿರೋ ಕಾರಣ ತಮಿಳುನಾಡಿನಲ್ಲಿ, ಒಂದು ಅಡಿ ಜೆಲ್ಲಿಗೆ 33 ರೂಪಾಯಿ ಏರಿಕೆ ಮಾಡಿದ್ದಾರೆ. ಈ ಮೊದಲು 14 ಸಾವಿರಕ್ಕೆ ಸಿಗ್ತಿದ್ದ ಒಂದು ಟಿಪ್ಪರ್ ಎಮ್ ಸ್ಯಾಂಡ್, ಈಗ 24 ಸಾವಿರ ದಾಟಿದ್ದು ಗುತ್ತಿಗೆದಾರರು ಹೈರಾಣಾಗಿದ್ದಾರೆ.

ಜಿಲ್ಲೆಯಾದ್ಯಂತ ಒಟ್ಟು 200 ಕೋಟಿಗು ಹೆಚ್ಚು ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ವಿವಿದೆಡೆ ರಸ್ತೆ ಕಾಮಗಾರಿಗಳನ್ನ ನಡೆಸುತ್ತಿದ್ದು, ಜೆಲ್ಲಿ, ಎಮ್ ಸ್ಯಾಂಡ್‍ಗಾಗಿ ಗುತ್ತಿಗೆದಾರರು ಪರದಾಡುತ್ತಿದ್ದಾರೆ, ಈ ಬಗ್ಗೆ ಮಾತನಾಡಿರುವ ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿ ಚಂದ್ರಶೇಖರ್ ಅವ್ರು, ಕ್ರಷರ್‍ಗಳು ಬಂದ್ ಆಗಿರುವ ಕಾರಣ ಜಿಲ್ಲೆಯಾದ್ಯಂತ ಕಾಮಗಾರಿಗಳಿಗೆ ಅಡಚಣೆಯಾಗಿದೆ ಎಂದಿದ್ದಾರೆ, ಇನ್ನು ಈ ಕುರಿತು ಮಾತನಾಡಿರುವ ಕ್ರಷರ್ ಮಾಲೀಕರು ಹಾಗು ಗುತ್ತಿಗೆದಾರರು ಸರ್ಕಾರ ಹಾಗು ಅಧಿಕಾರಿಗಳ ವಿರುದ್ದ ಕಿಡಿಕಾರಿದ್ದಾರೆ.

From Around the web