ಸಂತೇಬೆನ್ನೂರು ಪುಷ್ಕರಿಣಿಯಲ್ಲಿ ನೃತ್ಯ ವೈಭವ

 
ಸಂತೇಬೆನ್ನೂರು ಪುಷ್ಕರಿಣಿಯಲ್ಲಿ ನೃತ್ಯ ವೈಭವ

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಇತಿಹಾಸ ಪ್ರಸಿದ್ಧವಾದ ಸಂತೇಬೆನ್ನೂರು ಪುಷ್ಕರಿಣಿಯ ಕಾರಂಜಿ ಮಂಟಪದಲ್ಲಿ ಅಯಾನ ಡ್ಯಾನ್ಸ್‌ ಕಂಪನಿ ನಡೆಸಿರುವ ನೃತ್ಯ ಸಂಯೋಜನೆ ಸ್ವರಾಂಜಲಿ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುವುದರ ಜೊತೆಗೆ ನೋಡುಗರ ಕಣ್ಮನ ಸೆಳೆಯುತ್ತಿದೆ.

ಸಿನಿಮಾ ಶೂಟಿಂಗ್‌, ಪ್ರಿ ವೆಡ್ಡಿಂಗ್‌ ಶೂಟಿಂಗ್‌, ಸೆಲ್ಫಿ ಕ್ರೇಜ್‌ನ ಹಾಟ್‌ಸ್ಪಾಟ್‌ ಆಗಿರುವ ಈ ಕಾರಂಜಿ ಮಂಟಪಕ್ಕೆ ಅಯಾನ ಡ್ಯಾನ್ಸ್‌ ಕಂಪನಿ ನಡೆಸಿಕೊಟ್ಟ ಶಾಸ್ತ್ರೀಯ ನೃತ್ಯದಿಂದ ಹೊಸ ಆಯಾಮ ದೊರೆತಿದೆ. ಕೆರೆ, ಮಂಟಪದ ಸುತ್ತಮುತ್ತಲಲ್ಲಿ ಕಲಾವಿದರು ರಾಗಕ್ಕೆ, ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಾ ಮಾಡಿರುವ ನೃತ್ಯವನ್ನು ದೇಶ ವಿದೇಶಗಳಲ್ಲಿ ಸಾವಿರಾರು ಮಂದಿ ವೀಕ್ಷಿಸಿದ್ದಾರೆ.

From Around the web