ಜಿಂಕೆ ಮಾಂಸ ಸಾಗಣೆ ಮಾಡುತ್ತಿದ್ದ ವ್ಯಕ್ತಿಯ ಬಂಧನ

 
ಜಿಂಕೆ ಮಾಂಸ ಸಾಗಣೆ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಚಾಮರಾಜನಗರ: ಜಿಂಕೆ ಕೊಂದು ಮಾಂಸ ಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕಾವೇರಿ ವನ್ಯಧಾಮದ ಅರಣ್ಯ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹನೂರು ತಾಲೂಕಿನ ಭದ್ರಯ್ಯನಹಳ್ಳಿ ಗ್ರಾಮದ ನಾಗರಾಜು,(33) ಬಂಧಿತ ಆರೋಪಿಯಾಗಿದ್ದಾನೆ.

ಕೌದಳ್ಳಿ ಶಾಖೆಯ ಚನ್ನೂರು ಗಸ್ತಿನ ಸಿಪಿಟಿ 42 ವಿಠಲಯ್ಯನ ಬಂಡೆ ಅರಣ್ಯಪ್ರದೇಶದ ಗಡಿ ರೇಖೆಯ ಪಕ್ಕದಲ್ಲಿರುವ ವೀರ ಬಸವೇಗೌಡ ಎಂಬವರ ಖಾಸಗಿ ಜಮೀನಿನ ಸರ್ವೇ ನಂಬರ್ 141 ಪಟ್ಟ ಜಮೀನಿನಲ್ಲಿ ಜಿಂಕೆಯನ್ನು ಕೊಂದು, ಮಾಂಸ ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾವೇರಿ ವನ್ಯಧಾಮದ ಉಪ ಸಂರಕ್ಷಣಾಧಿಕಾರಿ ಡಾ.ರಮೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕೌದಳ್ಳಿ ವಲಯ ಅರಣ್ಯಾಧಿಕಾರಿ ವಿನಯಕುಮಾರ್ ಉಪವಲಯ ಅರಣ್ಯಾಧಿಕಾರಿ ಅನಂತರಾಮು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಅಂದಾಜು 30 ಕೆಜಿ ಜಿಂಕೆ ಮಾಂಸ,ಚೂರಿ, ಕುಡುಗೋಲು ಮತ್ತು ಜಿಂಕೆ ಚರ್ಮವನ್ನು ವಶಕ್ಕೆ ಪಡೆದು ಮೊಕದ್ದಮೆಯನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

From Around the web