ಸ್ಫೋಟಕಗಳನ್ನು ಬಚ್ಚಿಟ್ಟಿದ್ದ ಐವರ ಬಂಧನ

 
ಸ್ಫೋಟಕಗಳನ್ನು ಬಚ್ಚಿಟ್ಟಿದ್ದ ಐವರ ಬಂಧನ

ದಾವಣಗೆರೆ: ಇಲ್ಲಿನ ಕಾಡಜ್ಜಿ ಗ್ರಾಮದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯನ್ನು ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಇಲ್ಲಿನ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮಾನ್ವಿಯ ಇಸ್ಲಾಂ ನಗರದ ನಿವಾಸಿ ಶೇಖ್ ಮುಜಾಹಿದ್ ಸಿದ್ದಿಕಿ ಬಂಧಿತ. ಈತನು 50 ಬಾಕ್ಸ್‌ಗಳಲ್ಲಿ ಸಂಗ್ರಹಿಸಿಟ್ಟಿದ್ದ ₹1.10 ಲಕ್ಷ ಮೌಲ್ಯದ ಜಿಲೆಟಿನ್ ಕಡ್ಡಿಗಳು, ₹99 ಸಾವಿರ ಮೌಲ್ಯದ 6 ಬಾಕ್ಸ್ ಇಲೆಕ್ಟ್ರಾನಿಕ್ ಡಿಟೊನೇಟರ್ ಹಾಗೂ 750 ಕೆ.ಜಿ. ತೂಕದ ಅಮೊನಿಯಂ ನೈಟ್ರೇಟ್ ಪೌಡರ್ ಸೇರಿ ₹ 2.76 ಲಕ್ಷ ಮೌಲ್ಯದ ಸ್ಫೋಟಕವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಈವೆರೆಗೆ 5 ಮಂದಿಯನ್ನು ಬಂಧಿಸಲಾಗಿದೆ.

ಭಾನುವಾರ ಸೆರೆಸಿಕ್ಕ ಆರೋಪಿ ಬಿ.ಎಸ್‌.ವಿಕ್ರಮ್ ಎಂಬಾತ ಮುಜಾಹಿದ್ ಸಿದ್ದಿಕಿಗೆ ಸ್ಫೋಟಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ.

ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ಎಸ್. ಪುಷ್ಪಲತಾ, ವೀರಭದ್ರಪ್ಪ, ದೇವೆಂದ್ರನಾಯ್ಕ, ನಾಗರಾಜಯ್ಯ, ವೆಂಕಟೇಶ ರೆಡ್ಡಿ ಮಂಜನಗೌಡ, ಅರುಣ್‍ಕುಮಾರ್ ಕುರುಬರ ಪಾಲ್ಗೊಂಡಿದ್ದರು. ಎಸ್‌ಪಿ ಹನುಮಂತರಾಯ ಅವರು ತಂಡವನ್ನು ಅಭಿನಂದಿಸಿದ್ದಾರೆ.

From Around the web