ಜಿಲ್ಲಾಸ್ಪತ್ರೆ ನೌಕರರು ಸಂಬಳಕ್ಕಾಗಿ ಪ್ರತಿಭಟನೆ

ಕೋಲಾರ: ವೇತನ ನೀಡುವಂತೆ ಆಗ್ರಹಿಸಿ ಡಿ-ಗ್ರೂಪ್ ನೌಕರರು ಕೋಲಾರದ ಜಿಲ್ಲಾಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಘಟನೆ ಕೋಲಾರದಲ್ಲಿ ಜರುಗಿದೆ.

ಕೋಲಾರ ನಗರದ ಸರ್ಕಾರಿ ಜಿಲ್ಲಾಸ್ಪತ್ರೆ ಎದುರು ಆಸ್ಪತ್ರೆಯ ಡಿ-ಗ್ರೂಪ್ ನೌಕರರು ಪ್ರತಿಭಟನೆ ನಡೆಸಿದರು. ಕಳೆದ ಆರು ತಿಂಗಳಿನಿಂದ ಸಂಬಳನೀಡದ ಪರಿಣಾಮ ಜೀವನ ನಿರ್ವಹಣೆ ಮಾಡಲು ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡರು. ಅಲ್ಲದೆ ಹೊರಗುತ್ತಿಗೆ ಆಧಾರದ ಮೇಲೆ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಹಗಲು ರಾತ್ರಿ ಆಸ್ಪತ್ರೆಗೆ ಬರುವ ರೋಗಿಗಳ ಸೇವೆ ಮಾಡುತ್ತಿದ್ದರು ಸಹ, ಸರಿಯಾದ ಸಮಯಕ್ಕೆ ವೇತನವಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಇನ್ನು ಕೊರೊನಾ ಮಹಾಮಾರಿಯ ಸಂದರ್ಭದಲ್ಲೂ ತಮ್ಮ ಪ್ರಾಣದ ಹಂಗನ್ನತೊರೆದು, ಸುಮಾರು 50 ಜನ ಡಿ-ಗ್ರೂಪ್ ನೌಕರರು ರೋಗಿಗಳ ಸೇವೆ ಮಾಡಿದ್ದರೂ, ತಮ್ಮ ಸೇವೆಯನ್ನ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದರು. ಅಲ್ಲದೆ ತಮ್ಮಕೆಲಸಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎಂದು ಆರೋಪಿಸಿದರು. ಹೀಗಾಗಿ ವೇತನ ನೀಡುವವರೆಗೂ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ನಿರ್ಧಾರ ಮಾಡಿದ್ದಾರೆ ಇನ್ನು ಮೆಟ್ರೋ ಅನ್ನೋ ಸಂಸ್ಥೆ ನೌಕರರನ್ನು   ಪಡೆದುಕೊಂಡಿದ್ದು ಪಿಎಫ್, ಇಎಸ್. ಹಾಗು ಸ್ಯಲರಿ ಸರ್ಟಿಫೆಕೇಟ್ ಇದುವರೆ ನೀಡಿಲ್ಲ ಎಂದ್ರು ಸ್ಥಳಕ್ಕೆ ಜಿಲ್ಲಾಶಸ್ತ್ರಚಿಕಿತ್ಸ ಭೇಟಿ ನೀಡಿ ಸಂಬಳ ಕೊಡಿಸುವ ಭರವಸೆ ನೀಡಿದ್ರು.

From Around the web