ಜಿಲ್ಲಾ ಕಸಾಪ ನಿರ್ಲಕ್ಷ್ಯ : ಜಿಲ್ಲಾಡಳಿತ ಭವನದ ಎದುರು ಕಸದಂತೆ ಬಿದ್ದಿದ್ದ ಕನ್ನಡ ಬಾವುಟಗಳು..

 
ಜಿಲ್ಲಾ ಕಸಾಪ ದ ನಿರ್ಲಕ್ಷ್ಯ : ಜಿಲ್ಲಾಡಳಿತ ಭವನದ ಎದುರು ಕಸದಂತೆ ಬಿದ್ದಿದ್ದ ಕನ್ನಡ ಬಾವುಟಗಳು..

ಚಾಮರಾಜನಗರ: ಹೋರಾಟ, ಚಳವಳಿ ಹಾಗೂ ಕನ್ನಡ ಅಸ್ಮಿತೆ ವಿಚಾರ ಬಂದಾಗೆಲ್ಲೆಲ್ಲಾ ಮೊದಲು ಧ್ವನಿ ಎತ್ತುವ ಗಡಿಜಿಲ್ಲೆಯಲ್ಲಿ ಕನ್ನಡದ ಬಾವುಟವನ್ನು ಎಸೆದಿದ್ದ ಘಟನೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಜರುಗಿದೆ.

ಪೊಲೀಸ್ ಚೌಕಿ ಮುಂಭಾಗ ಕಾಫಿ ಕಪ್, ವಾಟರ್ ಬಾಟೆಲ್ ಎಸೆದಿದ್ದ ಸ್ಥಳದಲ್ಲಿ ಕನ್ನಡ ಬಾವುಟಗಳು, ಬಂಟಿಂಗ್ ಗಳನ್ನು ಎಸೆದಿದ್ದರು‌. ಇದನ್ನು, ಕಂಡ ಕನ್ನಡಪರ ಹೋರಾಟಗಾರರಾದ ಚಾ.ರಂ.ಶ್ರೀನಿವಾಸೌಡ ಹಾಗೂ ಪರಶಿವ ಮುಂತಾದವರು ಆಕ್ರೋಶ ಹೊರಹಾಕಿ ಬಾವುಟಗಳನ್ನು ಪೊಲೀಸ್ ಚೌಕಿಯೊಳಗೆ ಇರಿಸಿದ್ದಾರೆ.‌

ಬಾವುಟಗಳು ಕಸಾಪ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಬಳಸಿದ ಬಾವುಟಗಳು ಎನ್ನಲಾಗಿದ್ದು, ಸಾಹಿತ್ಯ ಸಮ್ಮೇಳನವನ್ನು ಹಬ್ಬದಂತೆ ಮಾಡಿ ಬಳಿಕ ಬಾವುಟಗಳನ್ನು ಕಸದಂತೆ ಎಸೆದಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಲಕ್ಷ್ಯ ಸರಿಯಿಲ್ಲ, ಬಾವುಟಕ್ಕೆ ಅಗೌರವ ತೋರಿದವರ ವಿರುದ್ದ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ಹೋರಾಟಗಾರರು ಒತ್ತಾಯಿಸಿದ್ದಾರೆ.

From Around the web