ಪೋಲಿಸ್ ಕ್ರೀಡಾಕೂಟಕ್ಕೆ ಚಾಲನೆ

 
ಪೋಲಿಸ್ ಕ್ರೀಡಾಕೂಟಕ್ಕೆ ಚಾಲನೆ

ಕೋಲಾರ: ಕಳೆದ ವರ್ಷ ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಪೋಲೀಸ್ ಕ್ರೀಡಾ ಕೂಟಕ್ಕೆ ಇಂದು  ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಚಾಲನೆ ನೀಡಿದ್ರು.

ಕೋಲಾರ ನಗರದ ಪೋಲೀಸ್ ಕವಾಯತು ಮೈದಾನದಲ್ಲಿರುವ ಪೋಲೀಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತುಇನ್ನು ಇಂದಿನಿಂದ ಮೂರು ದಿನಗಳ ಕಾಲ ನಡೆಯುವ  ವಾರ್ಷಿಕ ಕ್ರೀಡಾ ಕೂಟದಲ್ಲಿ ಮಹಿಳಾ ಸಿಬ್ಬಂದಿಗಳು ಭಾಗಿಯಾಗಿದ್ರು ಕ್ರೀಡಾಕೂಟದಲ್ಲಿ   ಕ್ರಿಕೇಟ್, ವಾಲಿಬಾಲ್, ಕಬ್ಬಡ್ಡಿ, ಲಾಂಗ್ ಜಂಪ್, ಹೈ ಜಂಪ್, ರನ್ನಿಂಗ್ ಇನ್ನಿತರೆ ಕ್ರೀಡೆಗಳಲ್ಲಿ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದ್ದಿಗಳು ಹಾಗೂ ಪೋಲಿಸ್ ಕುಟುಂಬಸ್ಥರು ಭಾಗಿಯಾಗಿದ್ದರು.

ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಕ್ರೀಡೆ ಬದುಕಿನ ಅವಿಭಾಜ್ಯ ಆಂಗವಾಗಬೇಕುಶಿಸ್ತಿಗೆ ಹೆಸರಾದ ಪೋಲಿಸ್ ಇಲಾಖೆಯ ಸಾಮರ್ಥ್ಯ ಏನೆಂಬುದು ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಸಾಭೀತಾಗಿದೆ. ಕೋವಿಡ್ ಹೆಚ್ಚಾದ ಸಮಯದಲ್ಲಿ ಪೋಲಿಸರು ಶಿಸ್ತಿನಿಂದ ಕೆಲಸ ಮಾಡಿದ್ದು ಶ್ಲಾಘನೀಯ ಎಂದ್ರು. ಇನ್ನು  ಎಸ್ಪಿ ಕಾರ್ತಿಕ್ರೆಡ್ಡಿ ಮಾತನಾಡಿ, ಕಳೆದ ವರ್ಷ ನಡೆಯಬೇಕಿದ್ದ ಪೋಲೀಸ್ ಕ್ರೀಡಾ ಕೂಟ ಇಂದಿನಿಂದ ಮೂರು ದಿನಗಳ ಕಾಲ ನಡೆಯುತ್ತಿದ್ದು, ಎಲ್ಲಾ ಅಧಿಕಾರಿಗಳು ಕ್ರೀಡೆಯಲ್ಲಿ  ಭಾಗವಹಿಸಿ ಸಿಬ್ಬಂದಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದ್ರು.

ಇನ್ನು ಕ್ರೀಡಾಕೂಟದ ಉದ್ಘಾಟನೆಗೂ ಮೊದಲು ಪೊಲೀಸ್ ಇಲಾಖೆಯ ವಿವಿಧ ವಿಭಾಗದ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು  ಅತಿಥಿಗಳು, ಸಾಮೂಹಿಕ ಗೌರವ ರಕ್ಷೆ ಸ್ವೀಕರಿಸಿದರು ಬಳಿಕ ಕ್ರೀಡಾ ಜ್ಯೋತಿ ಪ್ರದರ್ಶನ ನಡೆಯಿತು.

From Around the web