ಓಸಾಟ್ ಸಂಸ್ಥೆ ನಿರ್ಮಿಸಿದ ಶಾಲೆ ಉದ್ಘಾಟಿಸಿದ  ಶಿಕ್ಷಣ ಸಚಿವ ಸುರೇಶ್ ಕುಮಾರ್

 
ಓಸಾಟ್ ಸಂಸ್ಥೆ ನಿರ್ಮಿಸಿದ ಶಾಲೆ ಉದ್ಘಾಟಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಕೋಲಾರ:  ಓಸಾಟ್ ಸಂಸ್ಥೆ ವತಿಯಿಂದ ಮಾಲೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲಾ ಕಟ್ಟಡವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಉದ್ಘಾಟಿಸಿದರು

ಇದಕ್ಕೂ ಮುನ್ನ ಬಾಲಕರ ಕಾಲೇಜಿಗೆ ಭೇಟಿ ನೀಡಿ ದ್ವಿತೀಯ ಪಿಯುಸಿ ಪರೀಕ್ಷಾ ಕೊಠಡಿಗಳನ್ನು ಪರಿಶೀಲನೆ ನಡೆಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ  ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಿದ್ರು.

ಇನ್ನು  ಪರೀಕ್ಷೆ ರಣರಂಗವಲ್ಲ ಅದೊಂದು ಕ್ರೀಡಾಂಗಣ, ಗುರಿ ಮುಟ್ಟುವ ತನಕ ಹೋರಾಡಿ ಎಂದ್ರು ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳು ಆತಂಕ ಬೇಡ. ಪರೀಕ್ಷಾ ಅವಧಿಯಲ್ಲಿ ಮನೆ ಆಹಾರ ಬಳಸಿ ಆರೋಗ್ಯ ಕಾಪಾಡಿಕೊಳ್ಳಿ ಪರೀಕ್ಷೆಯನ್ನು ಆತ್ಮ ವಿಶ್ವಾಸದಿಂದ ಎದುರಿಸಿ ಗೆದ್ದು ಬನ್ನಿ. ಆತ್ಮಸ್ಥೈರ್ಯ ತುಂಬಿದರಲ್ಲದೆ, ಉತ್ತಮ ಅಂಕಗಳ ಮೂಲಕ ಉನ್ನತ ಪದವಿಗೇರಲು ಪ್ರಯತ್ನಿಸಭೇಕು ತಾಲೂಕಿನ ವಿದ್ಯಾರ್ಥಿಗಳು  ಐಎಎಸ್, ಐಪಿಎಸ್ ಗಳು ಆಗಬೇಕು ಎಂದ್ರು. ವೇಳೆ ಮಾದ್ಯಮದವರಿಗೆ ಪ್ರತಿಕ್ರಿಯಿಸಿ ಶಿಕ್ಷಣ ಸಚಿವ ಸುರೇಶ್ ಕುಮಾರ್  1 ರಿಂದ 5 ತರಗತಿಗಳ  ಪ್ರಾರಂಭಕ್ಕೆ ರಾಜ್ಯದಲ್ಲಿ ಒತ್ತಡ ಬರುತ್ತಿದೆ 10 ದಿನಗಳ ಹಿಂದೆ ಸೋಂಕಿನ ಸಂಖ್ಯೆ 350 ಕ್ಕೆ ಇಳಿದಿತ್ತು ಈಗ 700 ಕ್ಕೆ ಏರಿಕೆಯಾಗಿರೋದ್ರಿಂದ ಪರಿಸ್ಥಿತಿ ಬದಲಾವಣೆ ಆಗಿದೆ. ಅದ್ದರಿಂದ ಆರೋಗ್ಯ ಇಲಾಖೆಯ ಸಲಹೆ ಸೂಚನೆ ಪಡೆದು ನಂತರ  ತೀರ್ಮಾನ ಮಾಡುತ್ತೇವೆ ಎಂದ್ರು.

ಇನ್ನು  ಖಾಸಗಿ ಶಾಲೆಯಲ್ಲಿ ತರಗತಿ ಆರಂಭಿಸಿರುವ ಮಾಹಿತಿ ಬಂದಿದೆ. ಅದ್ರ ಬಗ್ಗೆ ಕ್ರಮ ವಹಿಸುತ್ತೇವೆ ಮಕ್ಕಳ ಯೋಗಕ್ಷೇಮಕ್ಕಾಗಿ ಸರ್ಕಾರ ಶೈಕ್ಷಣಿಕ ವರ್ಷ ಆರಂಭಿಸಿಲ್ಲ. ಕೋವಿಡ್ ಮಾರ್ಗಸೂಚಿಗಳನ್ನು  ಎಲ್ಲರೂ ಪಾಲಿಸಿ, ಗೌರವಿಸಬೇಕು. ಅದು ಅಲ್ಲದೇ ಖಾಸಗೀ ಶಿಕ್ಷ ಸಂಸ್ಥೆಯವರು ಒಂದರಿಂದ ಐದನೇ  ತರಗತಿಗಳನ್ನು ಪ್ರಾರಂಭಿಸುವ  ಕುರಿತು ಹೈಕೋರ್ಟ್ ನಲ್ಲಿ ಚಾಲೆಂಜ್ ಮಾಡಿರೋದ್ರಿಂದ ಹೈಕೋರ್ಟ್ ನಲ್ಲಿ ಮಾ.24 ನೇ ತಾರೀಖು ವಿಚಾರಣೆ ನಡೆಯಲಿದೆ.  ರಾಜ್ಯದಲ್ಲಿ ಕೋವಿಡ್ ಕಾರಣದಿಂದ ಶಿಕ್ಷಣ ಇಲಾಖೆಗೆ ಅನುದಾನ ಅರ್ಥಕವಾಗಿ ಕಡಿಮೆ ಆಗಿದೆ.

ಮಧ್ಯಾಹ್ನದ ಬಿಸಿ ಊಟ ಪ್ರಾರಂಭಕ್ಕೆ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆದಿದ್ದೇನೆ ಕೇಂದ್ರದಿಂದ ಹಸಿರು ನಿಶಾನೆ ಬಂದಿಲ್ಲ. ಬಂದ ತಕ್ಷಣ ಬಿಸಿಯೂಟ ಪ್ರಾರಂಭಿಸಲಾಗುತ್ತದೆ. ಮಹಾರಾಷ್ಟ್ರ ಕೇರಳಾ ದಿಂದ  ರಾಜ್ಯಕ್ಕೆ ಬರುವವರ ಮೇಲೆ ನಿಗಾ ವಹಿಸಲಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ ಕೊರೊನಾ ಎರಡನೇ ಅಲೆಯ ಆತಂಕ ಎದುರಾಗಿದೆ. ಇದರಿಂದ ಪುನಃ ಲಾಕ್ ಡೌನ್ ಬಗ್ಗೆ ಇನ್ನೂ  ಯಾವುದೇ ರೀತಿಯ ನಿರ್ಧಾರಮಾಡಿಲ್ಲ  ಕೊರೊನಾ ವಿಚಾರದಲ್ಲಿ ನಮ್ಮ ರಾಜ್ಯದ ನಿರ್ವಹಣೆ ಅಚ್ಚುಕಟ್ಟಾಗಿದೆ ಎಂದ್ರು.

From Around the web