ಸಫಾರಿಗೆ ತೆರಳಿದ್ದ ಪ್ರವಾಸಿಗರನ್ನು ಅಟ್ಟಾಡಿಸಿದ ಆನೆಗಳು...

 
ಸಫಾರಿಗೆ ತೆರಳಿದ್ದ ಪ್ರವಾಸಿಗರನ್ನು ಅಟ್ಟಾಡಿಸಿದ ಆನೆಗಳು...

ಚಾಮರಾಜನಗರ: ಸಫಾರಿಗೆ ತೆರಳಿದ್ದ ವೇಳೆ ಹಿಂದಿನಿಂದ ಒಂದು ಆನೆ ದಾಳಿ ಮಾಡಿದರೇ ಮುಂದಿನಿಂದಲೂ ಸಲಗವೊಂದು ಜೀಪನ್ನು ಅಡ್ಡ ಹಾಕಿ ಪ್ರವಾಸಿಗರು ಪತರುಗುಟ್ಟುವಂತಾಗಿರುವ ಘಟನೆ ಕೆ‌‌.ಗುಡಿ ಅರಣ್ಯದಲ್ಲಿ ಜರುಗಿದೆ.

ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಕೆ‌.ಗುಡಿ ಸಫಾರಿಯಲ್ಲಿ ಭತ್ತದಗದ್ದೆ ಕೆರೆ ಎಂಬ ರಸ್ತೆಯಲ್ಲಿ ಸಫಾರಿ ಜೀಪ್ ಕಂಡ ಆನೆಯೊಂದು ದಾಳಿ ಮಾಡಲು ಅಟ್ಟಾಡಿಸಿಕೊಂಡು ಬಂದಿದೆ. ಇದೇ ವೇಳೆ, ಮುಂದಿನಿಂದಲೂ ಆನೆಯೊಂದು ಜೀಪ್  ಅಡ್ಡಹಾಕಿ ಪ್ರವಾಸಿಗರನ್ನು ಬೆಚ್ಚಿ ಬೀಳಿಸಿದೆ. ಅದೃಷ್ಟವಶಾತ್,ಜೀಪ್ ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದೆ.

ಈ ಕುರಿತು,ಕೆ.ಗುಡಿ ಆರ್ ಎಫ್ ಒ ಶಾಂತಪ್ಪ ಪೂಜಾರ್ ಪ್ರತಿಕ್ರಿಯಿಸಿ, ಘಟನೆ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ ಆದರೆ ಭತ್ತದಗದ್ದೆ ಕೆರೆ ರಸ್ತೆಯಲ್ಲಿ 9 ಆನೆಗಳ ಗುಂಪಿದೆ. ಸಾಮಾನ್ಯವಾಗಿ ಒಂದು ಆನೆ ಅಟ್ಟಾಡಿಸಿಕೊಂಡು ಬರುವುದು ಸಹಜ ಆದರೆ, ಎರೆಡೆರಡು ಆನೆಗಳು ಸಫಾರಿ ವಾಹನವನ್ನು ಅಡ್ಡಗಟ್ಟಿದ್ದ ಘಟನೆ ತೀರಾ ಅಪರೂಪವಾಗಿದೆ ಎಂದರು.

From Around the web