ಕೊರೊನಾ ಸೇನಾನಿಗಳಿಗೆ ಎನರ್ಜಿ ಜ್ಯೂಸ್ ವಿತರಣೆ

 
ಕೊರೊನಾ ಸೇನಾನಿಗಳಿಗೆ ಎನರ್ಜಿ ಜ್ಯೂಸ್ ವಿತರಣೆ

ಕೋಲಾರ: ಕೋವಿಡ್ ಸಂಕಷ್ಟದಲ್ಲಿ ಮನೆಮಠ ಬಿಟ್ಟು ಸಾರ್ವಜನಿಕರ ಆರೋಗ್ಯಕ್ಕಾಗಿ ದುಡಿಯುತ್ತಿರುವ ಕರೋನಾ ಸೇನಾನಿಗಳಿಗೆ ರಾಜ್ಯ ಮಹಿಳಾ ಮೋರ್ಚ್ ಉಪಾಧ್ಯಕ್ಷೇ ಕುರ್ಕಿ ರಾಜೇಶ್ವರಿ ಎನರ್ಜಿ ಡ್ರೀಂಕ್ ಹಾಗೂ ಗ್ಲೋಕೊಸ್ ವಿತರಣೆ ಮಾಡಿದರು.

ನಗರದ ಎಸ್ಎನ್ಆರ್ ಜಿಲ್ಲಾಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಕರೋನಾ ಸೇನಾನಿಗಳಿಗೆ ಗೌರವ ಅರ್ಪಣೆ ಹಾಗೂ ಎನರ್ಜಿ ಡ್ರೀಂಕ್, ಗ್ಲೋಕೊಸ್ ವಿತರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ. ಅರ್ ಸೆಲ್ವಮಣಿ ಕೋಲಾರ ಶಾಸಕ ಕೆ‌. ಶ್ರೀನಿವಾಸ್ ಗೌಡ ಉದ್ಘಾಟಿಸಿದರು. ನಗರದ ಎಸ್ಎನ್ಆರ್ ಆಸ್ಪತ್ರೆಯಲ್ಲಿ ಕರೋನಾ ವಾರ್ಡ್ ಗಳಲ್ಲಿ ಸೇವೆ ಸಲ್ಲಿಸಿದ ಹಾಗೂ ಆಸ್ಪತ್ರೆಯ ನರ್ಸ್ ಗಳಿಗೆ, ಡಿ ಗ್ರೂಪ್ ನೌಕರರಿಗೆ ಮತ್ತು ಆಸ್ಪತ್ರೆ ಸಿಬ್ಬಂದಿಗೆ ಎನರ್ಜಿ ಜ್ಯೂಸ್ ಹಾಗೂ ಗ್ಲುಕೋಸ್ ಡಬ್ಬಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೋಲಾರ ಜಿಲ್ಲಾಧಿಕಾರಿ ಡಾ.ಅರ್ ಸೆಲ್ವಮಣಿ, ಕರೋನಾ ಸಂಧರ್ಭದಲ್ಲಿ ಕೆಲಸದ ಒತ್ತಡದ ನಡುವೆಯೂ ಜನರ ರಕ್ಷಣೆಗಾಗಿ ಕೊರೊನಾ ವಾರಿಯರ್ಸ್‌ ಹೋರಾಟ ಮಾಡಿದ್ದಾರೆ, ಕೊರೊನಾ ವಾರಿಯರ್ಸ್‌ಗೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪೋತ್ಸಾಹ ನೀಡುತ್ತಿರುವುದಕ್ಕೆ ಅಭಿನಂದನೆಗಳು ತಿಳಿಸಿದರು.

ಇನ್ನೂ ಕಾರ್ಯಕ್ರಮದ ರೂವಾರಿ ಜೆಡಿಎಸ್ ನಾಯಕಿ ಕುರ್ಕಿ ರಾಜೇಶ್ವರಿ ಮಾತನಾಡಿ ನಮಗಾಗಿ ದುಡಿದಿರುವ  ಕರೋನಾ ವಾರಿಯರ್ಸ್‌ ಅವರನ್ನು ಅಭಿನಂದಿಸಲು ಸಣ್ಣ ಪ್ರಯತ್ನ ಮಾಡಿದ್ದೆವೆ ಕರೋನಾ ವಾರಿಯರ್ಸ್‌ ಜೊತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೂ ಕೊಡ ಎನರ್ಜಿ ಜ್ಯೂಸ್ ಹಾಗೂ ಗ್ಲುಕೋಸ್ ವಿತರಣೆ ಮಾಡಿದ್ದೇವೆ ಎಂದ್ರು.

From Around the web