ಉದ್ಯಮದ ಅಭಿವೃದ್ಧಿಗಾಗಿ ಜಿಲ್ಲಾ ಹೊಟೇಲ್ ಮಾಲೀಕರ ಸಂಘ ಸ್ಥಾಪನೆ : ನಂದ್ಯಪ್ಪ ಶೆಟ್ಟಿ

 
ಉದ್ಯಮದ ಅಭಿವೃದ್ಧಿಗಾಗಿ ಜಿಲ್ಲಾ ಹೊಟೇಲ್ ಮಾಲೀಕರ ಸಂಘ ಸ್ಥಾಪನೆ : ನಂದ್ಯಪ್ಪ ಶೆಟ್ಟಿ

ಚಾಮರಾಜನಗರ: ಆಹಾರ ಸಂರಕ್ಷಣೆ, ಗ್ರಾಹಕರ ಆರೋಗ್ಯದ ಬಗ್ಗೆ ಕಾಳಜಿವಹಿಸಲು ಹಾಗೂ ಹೋಟೆಲ್ ಉದ್ಯಮದ ಅಭಿವೃದ್ಧಿಗಾಗಿ ಜಿಲ್ಲೆಯಲ್ಲಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘವನ್ನು ಸ್ಥಾಪನೆ ಮಾಡಲಾಗಿದೆ ಎಂದು ಜಿಲ್ಲಾ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಎಂ.ನಂದ್ಯಪ್ಪಶೆಟ್ಟಿ ಹೇಳಿದರು.

ಲೈಸನ್ಸ್ ಪಡೆದಿರುವ ಬೇಕರಿ, ಸ್ವೀಟ್ ಸ್ಟಾಲ್, ಸಸ್ಯಹಾರಿ, ಮಾಂಸಹಾರಿ ಹೋಟೆಲ್ ಮತ್ತು ರೆಸಾರ್ಟ್ ಗಳು ಜಿಲ್ಲಾ ಸಂಘದ ವ್ಯಾಪ್ತಿಗೆ  ಒಳಪಡಲಿವೆ. ಈ ಎಲ್ಲ ಕಡೆಗಳಲ್ಲಿಯೂ ಶುಚಿತ್ವ ಕಾಪಾಡಲು ಪ್ರಥಮ ಆದ್ಯತೆ ನೀಡುವ ಜೊತೆಗೆ ಗ್ರಾಹಕರ ಹಿತವನ್ನು ಕಾಯಲು ಮತ್ತು ಎಲ್ಲ ಹೋಟೆಲ್ ಮಾಲೀಕರಿಗೆ ಎದುರಾಗುವ ಸಮಸ್ಯೆಗಳ ಪರಿಹಾರಕ್ಕೆ ಸಂಘವನ್ನು ಸ್ಥಾಪನೆ ಮಾಡಲಾಗಿದೆ ಎಂದು ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಸಂಘದ ಬಲವರ್ಧನೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಲೈಸನ್ಸ್ ಪಡೆದಿರುವ ಎಲ್ಲ ಹೋಟೆಲ್ ಮಾಲೀಕರಿಗೆ ಸಂಘದ ಸದಸ್ಯತ್ವ  ನೀಡಲು ಅಭಿಯಾನ ಆರಂಭಿಸಲಾಗಿದೆ. ಪ್ರಸ್ತುತ ಚಾಮರಾಜನಗರ ತಾಲೂಕಿನಲ್ಲಿ ಲೈಸನ್ಸ್ ಪಡೆದಿರುವ 60 ಬೇಕರಿ, ಸ್ವೀಟ್ ಸ್ಟಾಲ್, ಸಸ್ಯಹಾರಿ, ಮಾಂಸಹಾರಿ ಹೊಟೆಲ್ ಮತ್ತು ರೆಸಾರ್ಟ್ ಗಳಿದ್ದು, ಅದರಲ್ಲಿ ಈಗಾಗಲೇ 20 ಜನರಿಗೆ ಸದಸ್ಯತ್ವ ನೀಡಲಾಗಿದೆ. ಮುಂದಿನ ವಾರದಿಂದ ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ ಹಾಗೂ ಹನೂರು ತಾಲೂಕುಗಳಲ್ಲಿ ಸದಸ್ಯತ್ವ ಅಭಿಯಾನ ಆರಂಭಿಸಲಾಗುವುದು ಎಂದು ತಿಳಿಸಿದರು.

From Around the web