ನಕಲಿ ರೈತ ನಾಯಕಿಯ ಅಸಲಿ ಮುಖ: ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಕಲಿ ರೈತ ನಾಯಕಿ

 
ನಕಲಿ ರೈತ ನಾಯಕಿಯ ಅಸಲಿ ಮುಖ: ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಕಲಿ ರೈತ ನಾಯಕಿ

ಕೋಲಾರ: ರೈತರನ್ನು ಉದ್ಧಾರ ಮಾಡುತ್ತೇವೆ ಎಂದು‌ ಹಸಿರು ಶಾಲು ಹಾಕಿಕೊಂಡು ಓಡಾಡುವ ಈ ಮಹಿಳೆ ಮಾಡುವುದು ಮಾತ್ರ ಅಸಹ್ಯ ಕೆಲಸ  ಹೌದು ರೈತ ಹೋರಾಟಗಾತಿಯ ಮುಖವಾಡ ಧರಿಸಿ ಪೋಸ್ ಕೊಡುತ್ತಿದ್ದ ನಕಲಿ ರೈತ ನಾಯಕಿಯ ಅಸಲಿ ಮುಖವನ್ನು ಪೋಲಿಸರು ಭೇದಿಸಿ ಆಕೆಯನ್ನು ಜೈಲಿಗೆ ಕಳುಹಿಸಿದ್ದಾರೆ, ಕೋಲಾರ ಜಿಲ್ಲೆಯ ಬಂಗಾರಪೇಟೆ ಪೋಲಿಸರ ಪಟ್ಟಣದ ವಿಜಯನಗರದ ಮನೆಯೊಂದರ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿ ನಾಲ್ಕು ಜನರನ್ನು ಬಂಧಿಸಿ ಮೂವರ ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ  ಕರ್ನಾಟಕ ರೈತ ಸೇನೆಯ ತಾಲ್ಲೂಕು ಮಹಿಳಾ ಘಟಕದ ಉಪಾಧ್ಯಕ್ಷೇ ಸರಸ್ವತಮ್ಮ ಹಾಗೂ ದಂಧೆಗೆ ಸಹಕರಿಸುತ್ತಿದ್ದ ರಾಜೇಶ್, ಚಂದ್ರ, ರವಿ ಎಂಬುವರನ್ನು ಪೋಲಿಸರು ಬಂಧಿಸಿ ಆಂದ್ರಪ್ರದೇಶ, ಅಸ್ಸಾಂ ರಾಜ್ಯದ ಮೂವರು ಯುವತಿಯರನ್ನು ರಕ್ಷಣೆ ಮಾಡಲಾಗಿದೆ.

ಖಚಿತ ಮಾಹಿತಿ ಮೇರೆಗೆ ಬಂಗಾರಪೇಟೆ ಸರ್ಕಲ್ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಗಾರಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

From Around the web