ಖಾಸಗೀಕರಣದಿಂದ ಸಾಮಾಜಿಕ ನ್ಯಾಯಕ್ಕೆ ದೊಡ್ಡ ಹೊಡೆತ ಬೀಳಲಿದೆ : ಕವಿ ಸಿದ್ದಲಿಂಗಯ್ಯ

 
ಖಾಸಗೀಕರಣದಿಂದ ಸಾಮಾಜಿಕ ನ್ಯಾಯಕ್ಕೆ ದೊಡ್ಡ ಹೊಡೆತ ಬೀಳಲಿದೆ : ಕವಿ ಸಿದ್ದಲಿಂಗಯ್ಯ

ಚಾಮರಾಜನಗರ: ಸರ್ಕಾರಿ ಇಲಾಖೆಗಳ ಖಾಸಗೀಕರಣ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದದ್ದು. ಇದರಿಂದ ಸಾಮಾಜಿಕ ನ್ಯಾಯಕ್ಕೆ ದೊಡ್ಡ ಹೊಡೆತ ಬೀಳಲಿದೆ. ಖಾಸಗೀಕರಣದಿಂದ ಕೆಳ ಹಾಗೂ ಮೇಲ್ವರ್ಗದ ಎಲ್ಲರೂ ಉದ್ಯೋಗ ಭದ್ರತೆ ಕಳೆದುಕೊಳ್ಳುವರು. ಖಾಸಗಿ ವಲಯದಲ್ಲಿ ಕೆಲಸ ಸಿಕ್ಕಿದವರಿಗೆ ಉದ್ಯೋಗ ಭದ್ರತೆ ಇರುವುದಿಲ್ಲ. ಸಂಬಳ ಭದ್ರತೆ ಇರುವುದಿಲ್ಲ. ಕಾರ್ಮಿಕರ ಹಾಗೂ ನೌಕರರ ಜೀವನದಲ್ಲಿ ಅಭದ್ರತೆ ಸೃಷ್ಟಿಯಾಗಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಕವಿ,ಸಾಹಿತಿ ಸಿದ್ದಲಿಂಗಯ್ಯ ಹೇಳಿದರು.

ಚಾಮರಾಜನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖಾಸಗೀಕರಣವನ್ನು ಸರ್ಕಾರಗಳು ತಡೆಯಬೇಕು. ಆದರೆ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಸರ್ಕಾರದ ಡಿಇನ್‌ಸ್ಟೆಮೆಂಟ್‌ ಎಂಬ ಇಲಾಖೆಯೇ ಇದೆ. ಇದು ಈಗಿನಿಂದ ಆರಂಭವಾಗಿದ್ದಲ್ಲ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇ ಆಗಿದ್ದು. ಇದು ದುರದುಷ್ಟಕರ. ಇದನ್ನು ನಾವು ವಿರೋಧಿಸಬೇಕಿದೆ ಎಂದರು.

ಇನ್ನು, ವಿವಿಧ ಜಾತಿಯ ಮಠಾಧೀಶರು ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಕುರಿತು ಮಾತನಾಡಿದ ಅವರು, ಸ್ವಾಮೀಜಿಗಳು ಬೀದಿಗಿಳಿದಿರುವುದು ಆಶ್ಚರ್ಯಕರ, ಆಧ್ಯಾತ್ಮದಿಂದ ರಾಜಕಾರಣದತ್ತ ಬರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಕೆಲವು ವಿಚಾರವಾದಿಗಳು ತಮ್ಮ ಬಗ್ಗೆ ಟೀಕೆ ಮಾಡುತ್ತಿರುವುದರ ಕುರಿತು ಪ್ರತಿಕ್ರಿಯಿಸಿ, ನಾನು ಬಿಜೆಪಿಗೆ ಸೇರಿದ್ದೇನೆ ಎಂದು ಅವರಂದುಕೊಂಡಿರಬಹುದು‌. ನಾನು ಯಾವ ಪಾರ್ಟಿಗೂ ಸೇರಿಲ್ಲ, ನನ್ನ ಮನೆಗೆ ಪ್ರಧಾನಿ ಮತ್ತು ದೊಡ್ಡವರು ದಲಿತರು, ಹಿಂದುಳಿದವರ ಪರವಾಗಿ ಸಲಹೆ ಕೇಳಿದಾಗ ಕೊಡುವುದಿಲ್ಲ ಎಂದು ಹೇಳಲಾಗುವುದಿಲ್ಲ. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ, ಕನ್ನಡದಲ್ಲೇ ಪರೀಕ್ಷೆ, ಅಟ್ರಾಸಿಟಿ ಕೇಸನ್ನು ಬಲಪಡಿಸುವುದು ಸೇರಿದಂತೆ ಹಲವು ಸಲಹೆಗಳನ್ನು ಕೊಟ್ಟೆನು,ಅದರಲ್ಲಿ ಕೆಲವು ಜಾರಿಯಾಗಿದೆ. ನಾನು ದಲಿತ ಸಾಹಿತಿಯಾಗಿ ಸಲಹೆ ಕೊಟ್ಟಿದ್ದೇ ತಪ್ಪು ಎನ್ನುವುದು ಸರಿಯಲ್ಲ, ತಿಳುವಳಿಕೆ ಇಲ್ಲದೇ ಟೀಕಿಸಿರಬಹುದು, ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ ಎಂದರು.

From Around the web