ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸರ್ಕಾರ ರೇಷನ್ ಅಕ್ಕಿ ವಶ
Wed, 17 Mar 2021

ಕೋಲಾರ: ಬೆಂಗಳೂರಿನಿಂದ ಬಂಗಾರಪೇಟೆಗೆ ಆಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪಡಿತರ ರೇಷನ್ ಅಕ್ಕಿ ಲಾರಿಯನ್ನು ಜೈಭೀಮ್ ದಲಿತ ಸೇನೆ ಸಂಘಟನೆ ಕಾರ್ಯಕರ್ತರು ತಡೆದು ಆಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಬೆಂಗಳೂರಿನಿಂದ ಸುಮಾರು 250 ಮೂಟೆಗೂ ಹೆಚ್ಚು ರೇಷನ್ ಅಕ್ಕಿಯನ್ನು ಈಚರ್ ಟೆಂಪೊ ವಾಹನದಲ್ಲಿ ಬಂಗಾರಪೇಟೆಗೆ ಸಾಗಾಟ ಮಾಡಲಾಗುತ್ತಿತ್ತು, ಖಚಿತ ಮಾಹಿತಿ ಹಿನ್ನೆಲೆ ಜೈಭೀಮ್ ದಲಿತ ಸೇನೆ ಸಂಘಟನೆ ಕಾರ್ಯಕರ್ತರು ಅಕ್ಕಿ ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದ ಆಧಿಕಾರಿಗಳಿಗೆ ಮಾಹಿತಿ ನೀಡಿದರು. ಇನ್ನೂ ಸ್ಥಳಕ್ಕೆ ಅಗಮಿಸಿದ ಕೋಲಾರ ತಹಶಿಲ್ದಾರ ಶೋಭಿತ್ ವಾಹನವನ್ನು ವಶಕ್ಕೆ ಪಡೆದು ಕೇಸ್ ದಾಖಲಿಸುವಂತೆ ಪೋಲಿಸರಿಗೆ ಸೂಚಿಸಿದರು.
ಬಡವರಿಗೆ ಸಿಗಬೇಕಾದ ಆಕ್ಕಿ ಕಳ್ಳಸಂತೆಯಲ್ಲಿ ಮಾರಾಟವಾಗುತ್ತಿದ್ದು ಸಂಬಂಧಪಟ್ಟ ಆಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಪ್ರತಿನಿತ್ಯ ಬೆಂಗಳೂರಿನಿಂದ ನೂರಾರು ಟನ್ ಸರ್ಕಾರಿ ರೇಷನ್ ಅಕ್ಕಿ ಬಂಗಾರಪೇಟೆಯ ಅಕ್ಕಿ ಗೋಡಾನಗಳಿಗೆ ಸರಬರಾಜು ಆಗುತ್ತಿದ್ದು ದಂಧೆಕೋರರು ಅಕ್ಕಿಗೆ ಪಾಲಿಷ್ ಮಾಡಿ ಲಕ್ಷಾಂತರ ರೂಪಾಯಿ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ. ಸಂಬಂಧಪಟ್ಟ ಆಧಿಕಾರಿಗಳು ದಂಧೆ ನಡೆಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.