ಸಿಎಂ ಯಡಿಯೂರಪ್ಪ ಚಾಮರಾಜನಗರಕ್ಕೆ ಬಂದಿದ್ದರೆ ಸಮಸ್ಯೆ ತಿಳಿಯುತ್ತಿತ್ತು: ಮರೀಸ್ವಾಮಿ

 
ಸಿಎಂ ಯಡಿಯೂರಪ್ಪ ಚಾಮರಾಜನಗರಕ್ಕೆ ಬಂದಿದ್ದರೆ ಸಮಸ್ಯೆ ತಿಳಿಯುತ್ತಿತ್ತು: ಮರೀಸ್ವಾಮಿ

ಚಾಮರಾಜನಗರ: ಸಿಎಂ ಯಡಿಯೂರಪ್ಪ ಅವರು ಚಾಮರಾಜನಗರಕ್ಕೆ ಬಂದಿದ್ದರೆ ಇಲ್ಲಿನಸಮಸ್ಯೆ ತಿಳಿಯುತ್ತಿತ್ತು. ಆದರೆ ಅವರು ಜಿಲ್ಲಾ ಕೇಂದ್ರಕ್ಕೆ ಬರಲಿಲ್ಲ. ಹೀಗಾಗಿ ಅವರು ಬಜೆಟ್ ನಲ್ಲಿ ಚಾಮರಾಜನಗರವನ್ನು ಕಡೆಗಣಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರೀಸ್ವಾಮಿ ಹೇಳಿದರು.

ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆ ಜಿಲ್ಲಾ ಕೇಂದ್ರಕ್ಕೆ ಹಲವಾರು ಬಾರಿ ಭೇಟಿ ನೀಡಿ, ಇಲ್ಲಿನ ಸಮಸ್ಯೆಗಳನ್ನು ತಿಳಿದು, ಚಾಮರಾಜನಗರದ ಅಭಿವೃದ್ದಿಗೆ 50 ಕೋಟಿ ವಿಶೇಷ ಅನುದಾನನೀಡಿದ್ದರು ಎಂದು ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಸಿಎಂ ಯಡಿಯೂರಪ್ಪ ಮಂಡಿಸಿರುವ ಬಜೆಟ್ ಸಂಪೂರ್ಣ ನಿರಾಶಾದಾಯಕ ಬಜೆಟ್ ಆಗಿದೆ.   ಬಾರಿಯ ಬಜೆಟ್ನಲ್ಲಿ ಚಾಮರಾಜನಗರಕ್ಕೆ ಸಂಪೂರ್ಣ ಅನ್ಯಾಯವಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಹೊಸ ಯೋಜನೆಗಳನ್ನಾ ಗಲಿ ಅಥವಾ ಅನುದಾನವನ್ನಾಗಲಿ ನೀಡಿಲ್ಲ. ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ಉಸ್ತುವಾರಿ ಸಚಿವರು ಸಿಎಂ ಮೇಲೆ ಒತ್ತಡ ತಂದು ಬಜೆಟ್ ನಲ್ಲಿ ಚಾಮರಾಜನಗರಕ್ಕೆ ಹೆಚ್ಚು ಅನುದಾನ ಕೊಡಿಸುತ್ತಾರೆ ಎನ್ನುವ ನಂಬಿಕೆ ಇತ್ತು. ಆದರೆ ಅದು ಸುಳ್ಳಾಯಿತು ಎಂದು ಹೇಳಿದರು.

ಸರ್ಕಾರ ಬಜೆಟ್ ನಲ್ಲಿ ಕೇವಲ ಆನೆ ಶಿಬಿರ, ಗೋಪಿನಾಥಂನಲ್ಲಿ ಸಫಾರಿಗಾಗಿ ಮಾತ್ರ 6ಕೋಟಿ  ಅನುದಾನ ನೀಡಿದೆ. ಆದರೆ ಅರಿಶಿಣ ಬೆಳೆಗಾರಿಗೆ ಅನುಕೂಲವಾಗುವಂತೆ ಬೆಂಬಲ ಬೆಲೆ ನಿಗದಿ ಮಾಡುವುದಾಗಲಿ, ಸಹಾಯ ಧನ ನೀಡುವುದಾಗಲಿ ಅಥವಾ ಅರಿಶಿಣ ಮಾರುಕಟ್ಟೆ ಸ್ಥಾಪನೆಯನ್ನು ಮಾಡಲಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿದ್ದವು, ಕುಡಿಯುವ ನೀರು ಯೋಜನೆ ಕಾರ್ಯ ಯಶಸ್ವಿಯಾಗಿ ನಡೆಯಿತು. ಆದರೆ ಇಂದಿನ ಸರ್ಕಾರದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರು ಜಿಲ್ಲೆಯ ಅಭಿವೃದ್ದಿ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

From Around the web