ನಾಯಿಕೊಡೆಗಳಂತೆ ತಲೆ ಎತ್ತುತಿವೆ ಅಕ್ರಮ ಲೇಔಟ್ ಗಳು

 
ನಾಯಿಕೊಡೆಗಳಂತೆ ತಲೆ ಎತ್ತುತಿವೆ ಅಕ್ರಮ ಲೇಔಟ್ ಗಳು

ಕೋಲಾರ: ಒಂದು ಕಾಲದಲ್ಲಿ ಹೇರಳವಾಗಿ ಚಿನ್ನ ಸಿಗುತ್ತಿದ್ದ ಕೆಜಿಎಫ್ ನಲ್ಲಿ ಚಿನ್ನ ಖಾಲಿಯಾಗಿ ದಶಕಗಳೇ ಕಳೆದಿವೆ ಆದ್ರೆ ಕೆಜಿಎಫ್ ಪ್ರದೇಶದಲ್ಲಿ ಕೈಗಾರಿಕಾ ವಲಯ ನಿರ್ಮಿಸಲು ಸರ್ಕಾರ ಹಸಿರು ನಿಶಾನೆ ತೋರಿಸುತ್ತಿದ್ದಂತೆ ಇಲ್ಲಿನ ಭೂಮಿಗೆ ಚಿನ್ನದ ಬೆಲೆ ಬಂದಿದ್ದ ಕೆಜಿಎಫ್ ಬಂಗಾರಪೇಟೆ ವ್ಯಾಪ್ತಿಯಲ್ಲಿ ನಾಯಿ ಕೊಡೆಗಳಂತೆ ಲೇಔಟ್ ಗಳು ನಿರ್ಮಾಣವಾಗುತ್ತಿವೆ.

ಲೇಔಟ್ ಮಾಲೀಕರ ಕೃಪಕಟಾಕ್ಷಕ್ಕೆ ಒಳಗಾಗಿರುವ ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರ ಇಲಾಖೆ ಹಣ ಕೊಟ್ಟರೆ ದಾಖಲೆಗಳನ್ನು ಪರಿಶೀಲನೆ ಮಾಡದೇ ಕಣ್ಣು ಮುಚ್ಚಿಕೊಂಡು ಲೇಔಟ್ ಗಳಿಗೆ ಪರವಾನಗಿ ನೀಡುತ್ತಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರ ಇಲಾಖೆಯಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಇಲಾಖೆಯಲ್ಲಿ ನಡೆದಿರುವ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರವನ್ನು ಸಿಬಿಐಗೆ ಒಪ್ಪಿಸಿ ಅಕ್ರಮದಲ್ಲಿ ಭಾಗಿಯಾಗಿರುವ ಆಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕಣ್ಣಿಗೆ ಕಾಣುವ ಹಾಗೆ ಕೆರೆ, ರಾಜ ಕಾಲುವೆ, ಸರ್ಕಾರಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡ ಲೇಔಟ್ ನಿರ್ಮಾಣ ಮಾಡಿರುವ ವಿ.ಆರ್ ವೆಂಚರ್ಸ್ ಲೇಔಟ್ ಮಾಲೀಕರಿಗೆ ನಗರಾಭಿವೃದ್ಧಿ ಪ್ರಾಧಿಕಾರ ಇಲಾಖೆ ಆಧಿಕಾರಿಗಳು ಆಕ್ರಮವಾಗಿ ಪರವಾನಿಗೆ ನೀಡಿರುವುದು ಇಲಾಖೆಯಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಉದಾಹರಣೆಯಾಗಿದೆ.

ಇಲಾಖೆಯಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿರುವ ವೆಂಕಟರಮಣ ರೆಡ್ಡಿ ಎಂಬ ವ್ಯಕ್ತಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಆಕ್ರಮಗಳಿಗೆ ಕಾರಣನಾಗಿದ್ದಾನೆ. ಲೇಔಟ್ ಮಾಲೀಕರ ಜೊತೆ ಶಾಮಿಲಾಗಿ ಆಧಿಕಾರಿಗಳು ಹಾಗೂ ಲೇಔಟ್ ಮಾಲೀಕರ ನಡುವೆ ಬ್ರೋಕರ್ ನಂತೆ ಕೆಲಸ ಮಾಡುತ್ತಿದ್ದಾನೆ  ಲಂಚ ನೀಡಿ ಪರಿಶೀಲನೆ ನಡಸದೇ  ಲೇಔಟ್ ಗಳಿಗೆ ಪರವಾನಿಗೆ ನೀಡುವಂತೆ ಎಲ್ಲಾ ಜವಾಬ್ದಾರಿಗಳನ್ನು ತೆಗೆದುಕೊಂಡ ಇಲಾಖೆಯನ್ನು ಭ್ರಷ್ಟಾಚಾರದ ಕೂಪವಾಗಿ ಮಾಡಿದ್ದಾನೆ ಎಂದು ರೈತ ಸಂಘಟನೆ ಮುಖಂಡ ನಾರಾಯಣ ಗೌಡ ಆರೋಪಿಸಿದ್ರು.

ಯಾವುದೇ ಲೇಔಟ್ ಗೆ ಪರವಾನಿಗೆ ಕೊಡುವ ಮೊದಲು ಕಂದಾಯ ಕಾನೂನು ಪ್ರಕಾರ ತಹಶಿಲ್ದಾರ ಸರ್ವೇ ನೋಂದಣಿ ಇಲಾಖೆ ಮತ್ತು ಜಿಲ್ಲಾಧಿಕಾರಿಗಳ ಭೂ ಪರಿವರ್ತನೆ, ಗ್ರಾಮ ಪಂಚಾಯತಿಯಿಂದ ಪರವಾನಿಗೆ ಪಡೆದು ನಂತರ ಎಲ್ಲಾ ದಾಖಲೆಗಳನ್ನು ನಗರಾಭಿವೃದ್ಧಿ ಪ್ರಾಧಿಕಾರದ ಆಧಿಕಾರಿಗಳು ಪರಿಶೀಲನೆ ಮಾಡಿ  ನಂತರ ಲೇಔಟ್ ನಿರ್ಮಾಣಕ್ಕೆ ಪರವಾನಿಗೆ ನೀಡಬೇಕು. ಆದ್ರೆ ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರ ಇಲಾಖೆಗೆ ಈ ಯಾವುದೇ ಕಾನೂನುಗಳು ಅನ್ವಯಿಸುತ್ತಿಲ್ಲ ಎಂದು  ಸಂಘಟನೆ ಮುಖಂಡರ ಆಕ್ರೋಶ ವ್ಯಕ್ತಪಡಿಸಿದರು.

From Around the web