ಸಂಸದರಿಂದ ಕೋವಿಡ್ ಲಸಿಕೆ ಕೇಂದ್ರಗಳ ಪರಿಶೀಲನೆ

ಕೋಲಾರ: ಇಲ್ಲಿನ ನರಸಾಪುರ ಗ್ರಾಮದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಡ್ 19 ಲಸಿಕಾ ಕೇಂದ್ರವನ್ನ ಸಂಸದ ಮುನಿಸ್ವಾಮಿ ಪರಿಶೀಲನೆ ನಡೆಸಿದರು. ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಲಸಿಕಾ ಜನಜಾಗೃತಿ ಕಾರ್ಯಕ್ರಮ ಅಂಗವಾಗಿ ಆಸ್ಪತ್ರೆಗೆ ಭೇಟಿ ನೀಡಿದ ಸಂಸದರು.
ಲಸಿಕೆ ಹಾಕಿಸಿಕೊಳ್ಳುತ್ತಿದ್ದವರ ಬಳಿ ಚರ್ಚೆ ನಡೆಸಿದರು. ಈ ವೇಳೆ ವೇಮಗಲ್ ಸಬ್ ಇನ್ಸ್ಪೆಕ್ಟರ್ ಆಂಜನಪ್ಪ ಅವರು 2 ನೇ ಹಂತದ ವ್ಯಾಕ್ಸಿನ್ ಹಾಕಿಕೊಂಡರು.
ಇದೇ ವೇಳೆ ಕೆಲ ಬಿಜೆಪಿ ಮುಖಂಡರು, ಹಾಗು ಸಾರ್ವಜನಿಕರು ಮೊದಲನೇ ಹಂತದ ಕೊರೋನಾ ವ್ಯಾಕ್ಸಿನ್ ಪಡೆದುಕೊಂಡರು. ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಸದಸ್ಯರು ಪ್ರತಿಯೊಬ್ಬರು ಲಸಿಕೆ ಹಾಕಿಸುವ ಜವಾಬ್ದಾರಿ ತಗೆದುಕೊಳ್ಳಬೇಕು. ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸೇರಿದಂತೆ ಸಿಎಂ ಯಡಿಯೂರಪ್ಪ ಸಹ ಲಸಿಕೆ ಹಾಕಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕರೆಯಂತೆ, ಬಿಜೆಪಿ ಮುಖಂಡರು ಅಗತ್ಯ ಸೌಲಭ್ಯಗಳನ್ನ ಕೈಲಾದಷ್ಟು ಕಲ್ಪಿಸಬೇಕು, ವಾಹನ ಸಂಚಾರಕ್ಕೆ ಎಲ್ಲಾ ವ್ಯವಸ್ಥೆಯನ್ನ ಬಿಜೆಪಿ ಮುಖಂಡರು ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.
ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾನಜಾಗೃತಿ ಕಾರ್ಯಕ್ರಮದಲ್ಲಿ, ತಾಲೂಕು ವೈದ್ಯಾಧಿಕಾರಿ ರಮ್ಯದೀಪಿಕಾ, ನರಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ್ಯೆ ಸುಮಿತ್ರಾ, ಉಪಾಧ್ಯಕ್ಷ್ಯ ಸುಮನ್ ಚಂದ್ರು, ಪಿಡಿಒ ಹಾಗು ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾದ ನವೀನ್ ಚಂದ್ರು ಸೇರಿದಂತೆ ಜಿಲ್ಲಾ ಬಿಜೆಪಿ ನಾಯಕರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.