ಜಿಲ್ಲಾಡಳಿತ, ಪೋಲಿಸ್ ಇಲಾಖೆಯಿಂದ ಜಂಟಿ ಕಾರ್ಯಚರಣೆ: ಅಕ್ರಮವಾಗಿ ಸಂಗ್ರಹಿಸಿದ್ದ 50 ಜಿಲೇಟಿನ್ ಕಡ್ಡಿಗಳು ವಶ

 
ಜಿಲ್ಲಾಡಳಿತ, ಪೋಲಿಸ್ ಇಲಾಖೆಯಿಂದ ಜಂಟಿ ಕಾರ್ಯಚರಣೆ: ಅಕ್ರಮವಾಗಿ ಸಂಗ್ರಹಿಸಿದ್ದ 50 ಜಿಲೇಟಿನ್ ಕಡ್ಡಿಗಳು ವಶ

ಕೋಲಾರ: ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಡೆದ ಜಿಲೇಟಿನ್ ಸ್ಪೋಟ ದುರಂತ ಘಟನೆ ನಂತರ ಎಚ್ಚೇತಕೊಂಡಿರುವ ಕೋಲಾರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗಳು ಜಂಟಿಯಾಗಿ ಜಿಲ್ಲೆಯ ಕ್ರಷರ್ ಗಳ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಶೇಖರಣೆ ಮಾಡಿಟ್ಟಿದ್ದ ಜಿಲೇಟಿನ್ ಕಡ್ಡಿಗಳು ವಶಕ್ಕೆ ಪಡೆದಿದ್ದಾರೆ.

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಟೇಕಲ್ ಹೋಬಳಿಯಲ್ಲಿ  ಜಿಲ್ಲೆಯಲ್ಲಿ ಅತೀ ಹೆಚ್ಚು ಕ್ರಷರ್ ಗಳಿರುವ ಸ್ಥಳವಾಗಿದೆ, ಈಗಾಗೀ ಕಂದಾಯ ಆಧಿಕಾರಿಗಳು ಹಾಗೂ ಪೋಲಿಸ್ ಇಲಾಖೆ  ಜಂಟಿ ಕಾರ್ಯಚರಣೆ ನಡೆಸಿ ಆಕ್ರಮವಾಗಿ ಶೇಖರಿಸಿಟ್ಟಿದ್ದ ಜಿಲೇಟಿನ್ ಕಡ್ಡಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶ್ವಸಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎರಡು ಪ್ರತ್ಯೇಕ FIR ದಾಖಲಾಗಿದೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಹಾಗೂ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಜ್ಯದ ಹಲವೆಡೆ ಜಿಲೇಟಿನ್ ಸ್ಪೋಟದಿಂದ ನಡೆದ ಭಾರಿ ಅವಾಂತರಗಳ ಹಿನ್ನೆಲೆ ಜಿಲ್ಲಾಡಳಿತ ಜಿಲ್ಲೆಯ ಕ್ರಷರ್ ಗಳ ಮೇಲೆ ಹೆಚ್ಚಿನ ನಿಗಾ ವಹಿಸಿದೆ. ಇನ್ನೂ ಜಿಲ್ಲಾ ಪಂಚಾಯತಿ ಸದಸ್ಯೆಯ ಪತಿ ವೆಂಕಟೇಶ್ ಎಂಬುವರಿಗೆ ಸೇರಿದ ಕ್ರಷರ್ ನಲ್ಲಿ  50 ಕ್ಕೂ ಹೆಚ್ಚು ಜಿಲೇಟಿನ್ ಕಡ್ಡಿಗಳನ್ನು  ಗುಂಡಿ ತೋಡಿ ಮುಚ್ಚಿಡಲಾಗಿದೆ.

ಸದ್ಯ ಜಿಲೇಟಿನ್ ಗಳು ಗುಂಡಿಯಲ್ಲೇ ಇದ್ದು ಹೊರತೆಗೆಯಲು ಮುಂದಾಗದ ಜಿಲ್ಲಾಡಳಿತ ಕ್ರಶರ್ ಮಾಲೀಕನ ವಿರುದ್ದ ಎಫ್.ಐ.ಆರ್ ದಾಖಲಿಸಲಾಗಿದೆ.

ಗುಂಡಿಯಲ್ಲಿ ತುಂಬಿರುವ ಜಿಲೇಟಿನ್  ಹೊರತೆಗೆಯಲು ಸಾಧ್ಯವಿಲ್ಲದ ಹಿನ್ನಲೆ ಸ್ಥಳದಲ್ಲಿ ಹೆಚ್ಚಿನ ಪೋಲಿಸರನ್ನು ನಿಯೋಜಿಸಲಾಗಿದೆ. ಇದೇ ವೇಳೆ ಕಲ್ಲುಬಂಡೆ ಹೊಡೆಯಲು ಜಿಲೇಟಿನ್ ಸ್ಟೋಟಿಸಲು ಮುಂದಾಗಿದ್ದ  ನಾಲ್ವರ ಬಂಧನ ಮಾಡಲಾಗಿದೆ.

From Around the web