ಲಾಂಗ್ ಹಿಡಿದು ಓಡಾಡಿದ ಮಾನಸೀಕ ಅಸ್ವಸ್ಥೆ

ದಾವಣಗೆರೆ: ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಇಂದು ಮುಂಜಾನೆ ಅಸ್ವಸ್ಥ ಮಹಿಳೆಯೊಬ್ಬಳು ಲಾಂಗ್ ಹಿಡಿದು ಪಟ್ಟಣದ ಮುಖ್ಯ ಬಸ್ ನಿಲ್ದಾಣ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ್ದು ಜನರು ಭಯಬೀತರಾಗಿ ಅತಂಕದಿಂದ ಓಡಿದ ಘಟನೆ ನಡೆಯಿತು.
ಅಸ್ವಸ್ಥ ಮಹಿಳೆಯು ಚನ್ನಗಿರಿ ಪಟ್ಟಣಕ್ಕೆ ಕಳೆದ ಮೂರು ದಿನಗಳ ಹಿಂದೆ ಬಂದಿದ್ದು ಬಸ್ ನಿಲ್ದಾಣದಲ್ಲಿ ಅರೆ ಬರೆ ಬಟ್ಟೆ ಧರಿಸಿ ಓಡಾಡುತ್ತಿದ್ದಳು. ಜನರು ಸಹ ಅಸ್ವಸ್ಥ ಮಹಿಳೆ ಎಂದು ಆಹಾರವನ್ನು ನೀಡುತ್ತಿದ್ದರು. ಆದರೆ ಇಂದು ಮುಂಜಾನೆ ಎಲ್ಲಿಂದಲೂ ಲಾಂಗ್ ಹಿಡಿದು ಬಂದ ಮಹಿಳೆಯು ಬಸ್ನಿಲ್ದಾಣಕ್ಕೆ ತೆರಳಿ ಖಾಸಗಿ ಬಸ್ಗಳ ಮೇಲೆ ಮಚ್ಚು ಬೀಸುತ್ತಾ ಚಲಿಸಿದ್ದು ಜನರು ಭಯಬೀತರಾಗಿ ಓಡಿದರು. ನಂತರ ಜನರು ಉಪಾಯದಿಂದ ಲಾಂಗನ್ನು ಮಹಿಳೆಯಿಂದ ಕಿತ್ತುಕೊಂಡ ನಂತರ ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಆಗಮಿಸಿ ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾರೆ.
ಈ ವೇಳೆ ಆಕೆಯ ಕುಟುಂಬವನ್ನು ಪತ್ತೆ ಹಚ್ಚಿದ್ದು ಈ ಅಸ್ವಸ್ಥ ಮಹಿಳೆಯು ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದ ರುಕ್ಮಣಿ ಎಂದು ತಿಳಿದಿದ್ದು ಮೂರು ಮಕ್ಕಳಿದ್ದು ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿದ್ದಾಳೆ ಎಂದು ತಿಳಿದು ಬಂದಿದೆ.