ಮಹಾ ಶಿವರಾತ್ರಿ ಹಬ್ಬದಂದೆ ಶಿವನಾಗ ಪ್ರತ್ಯಕ್ಷ

 
ಮಹಾ ಶಿವರಾತ್ರಿ ಹಬ್ಬದಂದೆ ಶಿವನಾಗ ಪ್ರತ್ಯಕ್ಷ

ಮೈಸೂರು: ಮಹಾಶಿವರಾತ್ರಿ ಹಬ್ಬದಂದು ಮೈಸೂರಿನ ಯಾದವಗಿರಿ ನಿವಾಸಿ ಶಿವಪ್ರಸಾದ್ ಅವರ ನಿವಾಸದಲ್ಲಿ ನಾಗರಹಾವೊಂದು ಕಂಡು ಬಂದಿದೆ.

ಮನೆ ಮಾಲಿ ಗಿಡಕ್ಕೆ ನೀರು ಹಾಕುವಾಗ ನಾಗರಹಾವು ಕಾಣಿಸಿಕೊಂಡಿದೆ.ತಕ್ಷಣ, ಮನೆಯವರುಹಾವನ್ನ ಕಂಡು ಉರಗತಜ್ಞ ಸ್ನೇಕ್ ಶ್ಯಾಮ್ ಅವರಿಗೆ  ಕರೆ ಮಾಡಿದ್ದಾರೆ.ಕರೆಗೆ ಸ್ಪಂದಿಸಿ ತಕ್ಷಣ ಆಗಮಿಸಿದ ಸ್ನೇಕ್ ಶ್ಯಾಂ ಪುತ್ರ ಉರಗಪ್ರೇಮಿ ಸೂರ್ಯ ಕೀರ್ತಿ ಹಾವನ್ನ ಸುರಕ್ಷಿತವಾಗಿ ಹಿಡಿದು ರಕ್ಷಣೆ ಮಾಡಿದ್ದಾರೆ.

ಶಿವರಾತ್ರಿ ಹಬ್ಬದ ದಿನ ಹಾವು ಕಂಡ ಮನೆಯವರಲ್ಲಿ ದೈವಭಾವ ಮೂಡಿದ್ದು, ಸಾಕ್ಷಾತ್ ಶಿವನೇ ಬಂದಿದ್ದಾನೆ ಎಂಬ ಸಂತೋಷ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆಹಬ್ಬದ ದಿನದಂದೆ ಹಾವನ್ನ ಸಂರಕ್ಷಿಸಿದ ಸೂರ್ಯಕೀರ್ತಿ ಸಹ ಹರ್ಷ ವ್ಯಕ್ತಪಡಿಸಿದ್ದಾರೆ

From Around the web