ತೆಂಗಿನ ಮರದಿಂದ ಆಯತಪ್ಪಿ ಕೆಳಗೆ ಬಿದ್ದು ವ್ಯಕ್ತಿ ಸಾವು

 
ತೆಂಗಿನ ಮರದಿಂದ ಆಯತಪ್ಪಿ ಕೆಳಗೆ ಬಿದ್ದು ವ್ಯಕ್ತಿ ಸಾವು

ಆನೇಕಲ್: ತೆಂಗಿನ ಮರದಿಂದ ಆಯತಪ್ಪಿ ಕೆಳಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಇಂಡ್ಲವಾಡಿ ಗ್ರಾಮದಲ್ಲಿ ನಡೆದಿದೆ.

ಕೋಣನಕುಂಟೆಯ ನಿವಾಸಿ ಕಾಂತರಾಜು (28) ಮೃತ ವ್ಯಕ್ತಿಯಾಗಿದ್ದಾನೆ. ಇಂಡ್ಲವಾಡಿ ಗ್ರಾಮದ ಮಹಾದೇವಪ್ಪ ಎಂಬುವವರು ತೋಟದಲ್ಲಿನ ತೆಂಗಿನ ಮರದ ಗರಿಯನ್ನು ಕತ್ತರಿಸಲು ಕಾಂತರಾಜುನನ್ನು ಕರೆತಂದಿದ್ದರು.  

ಸುಮಾರು 50 ಅಡಿ ಎತ್ತರದ ತೆಂಗಿನ ಮರದ ಮೇಲೇರಿ ಗರಿಯನ್ನು ಕತ್ತರಿಸುವ ವೇಳೆ ಆಯತಪ್ಪಿ ವ್ಯಕ್ತಿ ಕೆಳಗೆ ಬಿದ್ದಿದ್ದು ತಲೆಯ ಭಾಗಕ್ಕೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಘಟನೆ ಬಗ್ಗೆ ಸ್ಥಳೀಯರು ಆನೇಕಲ್ ಪೋಲಿಸರಿಗೆ ಮಾಹಿತಿ ಮುಟ್ಟಿಸಿದ್ದು, ಸ್ಥಳಕ್ಕೆ ಬಂದ ಪೋಲಿಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ ಪ್ರಕರಣ ಸಂಬಂಧ ದೂರು ದಾಖಲು ಮಾಡಿಕೊಂಡಿದ್ದಾರೆ.

From Around the web