ಪತ್ನಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಪತಿರಾಯನಿಗೆ ಜೀವಾವಧಿ ಶಿಕ್ಷೆ

 
ಪತ್ನಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಪತಿರಾಯನಿಗೆ ಜೀವಾವಧಿ ಶಿಕ್ಷೆ

ಆನೇಕಲ್: ಮದ್ಯ ಸೇವಿಸಲು ಹಣ ನೀಡಲಿಲ್ಲವೆಂದು ಪತ್ನಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಆರೋಪಿ ಪತಿಗೆ ಆನೇಕಲ್ ನ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸುವ ಮೂಲಕ ಮಹತ್ವದ ತೀರ್ಪನ್ನು ನೀಡಿದೆ.

ಆನೇಕಲ್ ತಾಲ್ಲೂಕಿನ ಸರ್ಜಾಪುರದ 45 ವರ್ಷದ ಮೌಲಾ ಜೀವಾವಧಿ ಶಿಕ್ಷೆಗೆ ಒಳಗಾದ ವ್ಯಕ್ತಿಯಾಗಿದ್ದಾನೆ. ಈತನಿಗೆ ಮೊದಲೇ ಎರಡು ಮದುವೆಯಾಗಿ ಇಬ್ಬರು ಪತ್ನಿಯರನ್ನು ಬಿಟ್ಟು ಜಬೀನಾ ಎಂಬ ಯುವತಿಯನ್ನು ಮೂರನೇ ಮದುವೆಯಾಗಿದ್ದ ಇವರಿಗೆ ಇಬ್ಬರು ಮಕ್ಕಳು ಸಹ ಇದ್ದರು. ಮೌಲಾ ಪ್ರತಿ ನಿತ್ಯ ಕಂಠ ಪೂರ್ತಿ ಕುಡಿದು ಬಂದು ಪತ್ನಿ ಜಬೀನಾಳಿಗೆ  ಹಿಂಸೆಯನ್ನು ನೀಡುತ್ತಿದ್ದ. 2014 ರಲ್ಲಿ ಮೌಲಾ ಕುಡಿತಕ್ಕೆ‌ ಹಣ ನೀಡು ಎಂದು ಜಗಳ ತೆಗೆದಿದ್ದ. ಹಣ ನೀಡದ ಪತ್ನಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಮೌಲಾ ವಿರುದ್ಧವಾಗಿ ಸರ್ಜಾಪುರ ಪೋಲಿಸರು ಪ್ರಕರಣ ಸಂಬಂಧ ದೂರನ್ನು ದಾಖಲು ಮಾಡಿಕೊಂಡು ಆರೋಪಿ ಮೌಲಾನನ್ನ ಬಂಧಿಸಿದ್ದರು.

ಈ ಪ್ರಕರಣ ಸಂಬಂಧ ಸತತ 6 ವರ್ಷಗಳ ಕಾಲ ವಾದ ಪ್ರತಿವಾದಗಳು ನಡೆದು ಇಂದು ಆನೇಕಲ್ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸೈಯದ್ ಅಲಿಗೂರ್ ರೆಹಮಾನ್ ರವರು ಜೀವಾವಧಿ ಶಿಕ್ಷೆ ಹಾಗೂ 13 ಸಾವಿರ ರೂ ದಂಡವನ್ನು ವಿಧಿಸುವ ಮೂಲಕ ಮಹತ್ವದ ತೀರ್ಪುನ್ನು ಪ್ರಕಟಿಸಿದ್ದಾರೆ.

ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾಗಿ ಗಣೇಶ್ ನಾಯಕ್ ವಾದ ಮಂಡನೆ ಮಾಡಿದ್ದರು.

From Around the web