ಡಿವೈಡರ್ ಗೆ ಒಮಿನಿ ಕಾರ್ ಡಿಕ್ಕಿ, ಚಾಲಕನ ಎರಡು ಕಾಲು ಮುರಿತ

 
ಡಿವೈಡರ್ ಗೆ ಒಮಿನಿ ಕಾರ್ ಡಿಕ್ಕಿ, ಚಾಲಕನ ಎರಡು ಕಾಲು ಮುರಿತ

ಚಾಮರಾಜನಗರ: ತಡರಾತ್ರಿ ಡಿವೈಡರ್ ಗೆ ಒಮಿನಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಚಾಲಕನ ಎರಡು ಕಾಲು ಮುರಿದು ಗಭೀರವಾಗಿ ಗಾಯವಾಗಿರುವ ಘಟನೆ ಕೊಳ್ಳೇಗಾಲ ಪಟ್ಟಣದ ಬಾಪುನಗರದ ಬಳಿ ಜರುಗಿದೆ.

ಮದ್ದೂರು ಗ್ರಾಮದ ಕಿರಣ್ ಕುಮಾರ್( 35) ಅಪಘಾತಕ್ಕಿಡಾದ ವ್ಯಕ್ತಿ.

ಕಿರಣ್ ಕಿಮಾರ್ ತನ್ನೂರಾದ ಮದ್ದೂರು ಗ್ರಾಮದಿಂದ ಒಮಿನಿ‌ ಕಾರಿನಲ್ಲಿ ಕೊಳ್ಳೇಗಾಲ ಪಟ್ಟಣಕ್ಕೆ ಬರುವಾಗ ಬಾಪುನಗರ ಹೆದ್ದಾರಿ ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತಕ್ಕಿಡಾಗಿ ಎರಡು ಕಾಲು ಮುರಿದು, ತೀವ್ರವಾಗಿ ಗಾಯಗೊಂಡಿದ್ದಾರೆ.

ಕಾರೊಳಗೆ ಸಿಲುಕಿಕೊಂಡಿದ್ದ ಕಿರಣ್ ಕುಮಾರ್ ಅನ್ನು ಹೊರ ತೆಗೆದು ಚಿಕಿತ್ಸೆಗಾಗಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತ ಕೆಎಸ್ಆರ್ ಟಿ ಬಸ್ ಚಾಲಕ ಎಂದು ತಿಳಿದು ಬಂದಿದೆ.

ಪಟ್ಟಣದ ಪೊಲೀಸರು ಅಫಘಾತವಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

From Around the web