ಗೃಹಪ್ರವೇಶದ ಊಟ ಸವಿದ 40ಕ್ಕೂ ಹೆಚ್ಚು ಜನರಿಗೆ ವಾಂತಿ-ಬೇಧಿ...!

 
ಗೃಹಪ್ರವೇಶದ ಊಟ ಸವಿದ 40ಕ್ಕೂ ಹೆಚ್ಚು ಜನರಿಗೆ ವಾಂತಿ-ಬೇಧಿ...!

ಚಾಮರಾಜನಗರ: ಗೃಹಪ್ರವೇಶದ ಭೋಜನ ಸವಿದ ಗ್ರಾಮದ 40ಕ್ಕೂ ಹೆಚ್ಚು ಮಂದಿಗೆ ವಾಂತಿ-ಬೇಧಿ ಕಾಣಿಸಿಕೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಚೆನ್ನವಡೆಯನಪುರ ಗ್ರಾಮದಲ್ಲಿ ನಡೆದಿದೆ.

ಈ ಕುರಿತು ಗ್ರಾಮದ ಶಿವಕುಮಾರ್ ಮಾಹಿತಿ ನೀಡಿದ್ದು, ಗೃಹಪ್ರವೇಶ ಇದ್ದದ್ದು ಗುರುವಾರ. ಆದರೆ, ಅಲ್ಲಿಗೆ ತೆರಳಿದ 50 ಕ್ಕೂ ಹೆಚ್ಚು ಮಂದಿಗೆ ಶುಕ್ರವಾರ ಹೊಟ್ಟೆನೋವು, ವಾಂತಿ-ಬೇಧಿ ಕಾಣಿಸಿಕೊಂಡಿದೆ. ನಾನು ಕೂಡ ಆಹಾರ ಸೇವಿಸಿದ್ದು ನನಗೇನು ಸಮಸ್ಯೆಯಾಗಿಲ್ಲ ಎಂದು ತಿಳಿಸಿದರು.

ಇನ್ನು, ಅಸ್ವಸ್ಥರನ್ನು ಬೇಗೂರು ಆಸ್ಪತ್ರೆಗೆ ದಾಖಲಿಸಿದ್ದು 10 ಕ್ಕೂ ಹೆಚ್ಚು ಮಂದಿ ಮನೆಗೆ ತೆರಳಿದ್ದಾರೆ, ಸಂಘಟನೆ ವತಿಯಿಂದ ಅಸ್ವಸ್ತರ ಯೋಗಕ್ಷೇಮ ವಿಚಾರಿಸಲಾಗಿದೆ ಎಂದು ಕನ್ನಡಪರ ಹೋರಾಟಗಾರ ಬೇಗೂರು ಅಶೋಕ್ ಮಾಹಿತಿ ನೀಡಿದರು.

ಸದ್ಯ, ಈ ಸಂಬಂಧ ಬೇಗೂರು ಠಾಣೆಯಲ್ಲಿ ದೂರಾಗಲಿ, ಪ್ರಕರಣವಾಗಲಿ ದಾಖಲಾಗಿಲ್ಲ.‌ವಾಂತಿ ಬೇಧಿಗೂ ನೈಜ ಕಾರಣ ತಿಳಿದುಬಂದಿಲ್ಲ.

From Around the web