ಪೊಲೀಸರ ಕಾರ್ಯಾ :  ಅಕ್ರಮವಾಗಿ ನಾಡ ಬಂದೂಕು ಹೊಂದಿದ್ದ ಇಬ್ಬರ  ಬಂಧನ

 
ಪೊಲೀಸರ ಕಾರ್ಯಾ : ಅಕ್ರಮವಾಗಿ ನಾಡ ಬಂದೂಕು ಹೊಂದಿದ್ದ ಇಬ್ಬರ ಬಂಧನ

ಚಾಮರಾಜನಗರ: ಅಕ್ರಮವಾಗಿ ನಾಡಬಂದೂಕನ್ನು ಇಟ್ಟುಕೊಂಡಿದ್ದ ಇಬ್ಬರನ್ನು ಗ್ರಾಮಾಂತರ ಪೊಲೀಸರು ಬಂಧಿಸಿ, ಅವರಿಂದ ಎರಡು ಬಂದೂಕನ್ನು ವಶಪಡಿಸಿಕೊಂಡಿದ್ದಾರೆ.

ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಜಾಗೇರಿ ಹಳೇಕೋಟೆ ಗ್ರಾಮದ ತಂಗಮಣಿ(58) ಹಾಗೂ ಶಿಲುವೈಪುರ ಗ್ರಾಮದ ಅಮಲ್‌ ಸೆಲ್ವ ಕುಮಾರ್ (39) ಬಂಧಿತ ಆರೋಪಿಗಳು.

ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಪಾಸ್ಕಲ್ ನಗರದ ಗ್ರಾಮದ‌ ಬಳಿ ಇರುವ ಜಪಮಾಲೆ ಮಾದಗುಡ್ಡ ಅರಣ್ಯದ ಕಾಲುದಾರಿಯಲ್ಲಿ ಕಾಡು ಪ್ರಾಣಿಗಳ ಶಿಕಾರಿಗೆ ಹೋಗುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿಪಿಐ ಶ್ರೀಕಾಂತ್ ಹಾಗೂ ಗ್ರಾಮಾಂತರ ಠಾಣಾ ಪಿಎಸ್ಐ ಅಶೋಕ್ ರವರು ಪೊಲೀಸ್ ಸಿಬ್ಬಂದಿಗಳು ಜೊತೆಯಲ್ಲಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂದೂಕು ಸಮೇತ ಬಂಧಿಸಿದ್ದಾರೆ.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

From Around the web