ಅಕ್ರಮ ಮದ್ಯ ಅಡ್ಡೆಗಳ ಮೇಲೆ ಪೋಲಿಸರ ದಾಳಿ

 
ಅಕ್ರಮ ಮದ್ಯ ಅಡ್ಡೆಗಳ ಮೇಲೆ ಪೋಲಿಸರ ದಾಳಿ

ಕೋಲಾರ: ಅಕ್ರಮ ಮದ್ಯ ಕೂಟಗಳ ಅಡ್ಡೆಗಳಮೇಲೆ ಕೆಜಿಎಫ್ ಪೊಲೀಸರ ದಾಳಿ ನಡೆಸಿ ಆಕ್ರಮವಾಗಿ ಮದ್ಯ ಕೂಟದಲ್ಲಿ ಭಾಗಿಯಾಗಿದ್ದ ಹತ್ತು ಜನರನ್ನು ಬಂಧಿಸಿದ್ದಾರೆ.

ಕೋಲಾರ ಜಿಲ್ಲೆಯ ಕೆಜಿಎಫ್ ನಗರದಲ್ಲಿ ಕುಡುಕರ ಹಾವಳಿ ಹೆಚ್ಚಾದ  ಹಿನ್ನೆಲೆ ಕೆಜಿಎಫ್ ಎಸ್ಪಿ ಇಲಕ್ಕಿಯಾ ಕರುಣಾಗರನ್ ನೇತೃತ್ವದ ಪೊಲೀಸರ ತಂಡ ದಿಂದ ಶೋಧ ಕಾರ್ಯ ನಡೆಸಲಾಗಿದೆ.

ಕೆಜಿಎಫ್ ನಗರದ ಪಾರಂಡಹಳ್ಳಿ, ಅಂಡರ್ ಸನ್ ಪೇಟೆ, ಮಾರಿಕುಪ್ಪಂ, ಸಲ್ಡಾನ ವೃತ್ತಗಳಲ್ಲಿ ಜನ ನಿಬಿಡ ಪ್ರದೇಶದಲ್ಲಿ ಅಕ್ರಮ ಮದ್ಯ ಕೂಟ ಅಯೋಜನೆ ಮಾಡಿದ್ದವರ ಎಡೆಮುರಿ ಕಟ್ಟಿದ್ದಾರೆ ಪೊಲೀಸರು, ವೇಳೆ  ಅಕ್ರಮ ಮದ್ಯ ಕೂಟ ಸೇರಿದ್ದ ೧೦ ಕ್ಕು ಹೆಚ್ವು ಜನರ ಬಂಧನ ಮಾಡಿ ಬಂಧಿತರಿಂದ ಮದ್ಯ ವಶಕ್ಕೆ ಪಡೆದಿದ್ದಾರೆ ಕೆಜಿಎಪ್ ಪೊಲೀಸರು.

 ಇತ್ತಿಚೆಗೆ ಕೆಜಿಎಫ್ ನಗರದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದ ಎಲ್ಲೆಂದರಲ್ಲಿ ಕಿಡಿಗೇಡಿಗಳ ಕುಡಿದು ರಸ್ತೆಯಲ್ಲಿ ಹೋಗುವವರು ಮೇಲೆ ದಾಂಧಲೆ ನಡೆಸುವ ಪ್ರಕರಣಗಳು ಹೆಚ್ಚಾಗುತ್ತಿದ್ದವು. ರಾತ್ರಿಯಾದರೆ ಸಾಕು ಜನನಿಬಿಡ ಪ್ರದೇಶಗಳಲ್ಲಿ ಸೇರಿ ಮದ್ಯಕೂಟ ಆಯೋಜನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ರು. ಕುಡುಕರಿಂದ ಸಾರ್ವಜನಿಕರ ಮೇಲೆ ದಾದಾಗಿರಿ ಮಾಡುವುದು, ಹೊಡೆದಾಟ ನಡೆಸುವುದು. ಸುಖಸುಮ್ಮನೇ ಸಾರ್ವಜನಿಕರ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕುವಂತಹ ಕೃತ್ಯಗಳು ಹೆಚ್ಚಾಗಿದ್ದವು.

ಇವೆಲ್ಲವನ್ನೂ ಕಡಿವಾಣ ಹಾಕಲು ಮುಂದಾಗಿರುವ ಕೆಜಿಎಫ್ ಪೋಲಿಸರು ರಾತ್ರಿವೇಳೆ ಎಲ್ಲೆಂದರಲ್ಲಿ ಕುಡಿಯುವ ಅಡ್ಡೆಗಳ ಮೇಲೆ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ.

From Around the web