ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರಕ್ಕೆ ಪೊನ್ನಾಚಿ ಮಹಾದೇವಸ್ವಾಮಿ ಆಯ್ಕೆ

 
ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರಕ್ಕೆ ಪೊನ್ನಾಚಿ ಮಹಾದೇವಸ್ವಾಮಿ ಆಯ್ಕೆ

ಚಾಮರಾಜನಗರ: ಹನೂರು ತಾಲೂಕಿನ ಪೊನ್ನಾಚ್ಚಿ ಗ್ರಾಮದ ಪೊನ್ನಾಚಿ ಮಹಾದೇವಸ್ವಾಮಿ ಅವರು ಯುವ ಸಾಹಿತಿಗಳಿಗೆ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು ದೆಹಲಿಯಲ್ಲಿ ಪ್ರದಾನ ಮಾಡಲಿದ್ದು 50 ಸಾವಿರ ರೂ. ನಗದು ಬಹುಮಾನ ಒಳಗೊಂಡಿರಲಿದೆ. ಹನೂರು ತಾಲೂಕಿನ ಪೊನ್ನಾಚಿ ಗ್ರಾಮದ ಕೆ.ಎಸ್‌. ಮಹಾದೇವಸ್ವಾಮಿ ಪೊನ್ನಾಚಿ ಮಹಾದೇವಸ್ವಾಮಿ ಕಾವ್ಯನಾಮದಲ್ಲಿ ಕವನ, ಕಥೆಗಳನ್ನು ಬರೆಯಲಿದ್ದು ಯಳಂದೂರಿನ ಬಿಆರ್ಟಿ ಸೆಂಟರಿನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಧೂಪದ ಮಕ್ಕಳು ಎಂಬ ಕಥಾ ಸಂಕಲನವು ಇವರ ಎರಡನೇ ಕೃತಿಯಾಗಿದ್ದು ಇದಕ್ಕೂ ಮೊದಲು 'ಸಾವೊಂದನ್ನು ಬಿಟ್ಟು..' ಎಂಬ ಕವನ ಸಂಕಲನ ಪ್ರಕಟಣೆಯಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಕ್ಕೆ ಪಾತ್ರವಾಗಿರುವ 'ಧೂಪದ ಮಕ್ಕಳು' ಕೃತಿ  2018 ರಲ್ಲಿ  ಪ್ರಕಟವಾಗಿದ್ದು ಈಗಾಗಲೇ ಪಾಪು ಕಥಾ ಪುರಸ್ಕಾರ, ಛಂದ ಪುಸ್ತಕ ಬಹುಮಾನ  ದೊರೆತಿದೆ.

From Around the web