ಠೇವಣಿ ಹಣಕ್ಕಾಗಿ ಮಹಿಳಾ ಸಂಘಗಳ ಸದಸ್ಯರಿಂದ ಪ್ರತಿಭಟನೆ

 
ಠೇವಣಿ ಹಣಕ್ಕಾಗಿ ಮಹಿಳಾ ಸಂಘಗಳ ಸದಸ್ಯರಿಂದ ಪ್ರತಿಭಟನೆ

ಕೋಲಾರ: ಸುಮಾರು ಲಕ್ಷಗಟ್ಟಲೆ ಠೇವಣಿ ಇಟ್ಟಿರುವ ಹಣವನ್ನು ನೀಡದೇ ಸತಾಯಿಸುತ್ತಿರುವ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿ ವಿರುದ್ಧ  ಮಹಿಳೆಯರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕೋಲಾರ ತಾಲೂಕಿನ ವಡಗೂರು ಗ್ರಾಮದ ಸಹಕಾರ ಸಂಘದ ಬ್ಯಾಂಕಿನ ಮುಂದೆ ಠೇವಣಿ ಇಟ್ಟಿರುವ ಮಹಿಳೆಯರು ಪ್ರತಿಭಟನೆ ನಡೆಸಿದರು. ಠೇವಣಿ ಹಣ ಕೊಡಲೇ ಹಿಂದಿರುಗಿಸುವಂತೆ ಒತ್ತಾಯಿಸಿದರು.  

ಹುತ್ತೂರು ಹೋಬಳಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಲ್ಲಿ 2019 ರಲ್ಲಿ ಹಲವು ಮಹಿಳಾ ಸಂಘಗಳು ಸಾಲ ಪಡೆದು ಚಾಚೂ ತಪ್ಪದೆ ಮರುಪಾವತಿ ಮಾಡಿದ್ದವು. ಮರುಪಾವತಿಸಿದ ನಂತರ ಮಹಿಳಾ ಖಾತೆದಾರರು ತಲಾ 7500 ಠೇವಣಿ ಇಟ್ಟಿದ್ರು. ಸಾಲ ಮರುಪಾವತಿಸಿದ ಸಂಘಗಳಿಗೆ ಸಾಲ ನೀಡಿ ಇಲ್ಲದಿದ್ದರೆ ಠೇವಣಿ ಇಟ್ಟಿರುವ ಹಣ ವಾಪಸ್ ನೀಡುವಂತೆ ಮಹಿಳೆ ಸಂಘಗಳ ಸದಸ್ಯರು ಪ್ರತಿಭಟನೆ ನಡೆಸಿದರು.

ಹುತ್ತೂರು ಹೋಬಳಿಯ 80 ಸಂಘಗಳಿಗೂ ಇದೇ ಪರಿಸ್ಥಿತಿ ಇದ್ದು ಸಂಘಗಳ ಸದಸ್ಯರು ಇಟ್ಟಿರುವ ಠೇವಣಿ ಹಣವನ್ನು ಸಹಕಾರ ಸಂಘದ ವ್ಯವಸ್ಥಾಪಕ ವಿಜಯ್ ಕುಮಾರ್  ಲಪಾಟಿಯಿಸಿದ್ದಾರೆ ಎಂದು ಆರೋಪಿಸಿ ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ ಸಮಸ್ಯೆಯನ್ನು ಪರಿಹರಿಸುವಂತೆ ಮಹಿಳೆಯರು ಒತ್ತಾಯಿಸಿದರು.

From Around the web