ಮಾದಪ್ಪನ ಸನ್ನಿಧಿಯ ಹುಂಡಿ ಹಣ ಎಣಿಕೆ : 27 ದಿನಗಳ ಅವಧಿಯಲ್ಲಿ 1.54ಕೋಟಿ ರೂ. ಸಂಗ್ರಹ

 
ಮಾದಪ್ಪನ ಸನ್ನಿಧಿಯ ಹುಂಡಿ ಹಣ ಎಣಿಕೆ : 27 ದಿನಗಳ ಅವಧಿಯಲ್ಲಿ 1.54ಕೋಟಿ ರೂ. ಸಂಗ್ರಹ

ಚಾಮರಾಜನಗರರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದ ಪವಾಡ ಪುರುಷ ಮಾದಪ್ಪನ ಸನ್ನಿಧಿಯ ಹುಂಡಿಹಣ ಎಣಿಕೆ ನಡೆದಿದ್ದು, 28 ದಿನಗಳ ಅವಧಿಯಲ್ಲಿ ಬರೋಬ್ಬರಿ 1.54 ಕೋಟಿ ರೂ. ಸಂಗ್ರಹವಾಗಿದೆ.

ಕಳೆದ ಬಾರಿ 28 ದಿನಗಳ ಅವಧಿಯಲ್ಲಿ 1,48,73,233 ಕೋಟಿ ರೂ. ಸಂಗ್ರಹವಾಗಿತ್ತು. ಬಾರಿ 28 ದಿನಗಳ ಅವಧಿಯಲ್ಲಿ 1,54,64,147 ಕೋಟಿ ರೂ. ಸಂಗ್ರಹವಾಗಿದ್ದು, ಭಕ್ತರು ಮಾದಪ್ಪನಿಗೆ ಹಣದ ರೂಪದಲ್ಲಿ ಭಕ್ತಿಯ ಕಾಣಿಕೆಯ ಹೊಳೆಯನ್ನೆ ಹರಿಸಿದ್ದಾರೆಕೊರೊನಾ ನಂತರದಲ್ಲಿ ಉತ್ಸವಗಳು, ವಿಶೇಷ ಸೇವೆಗಳಿಗೆ ಹಾಗೂ ವಿಶೇಷ ದಿನಗಳಲ್ಲಿ ಮಾದಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಿಕೊಟ್ಟ ಹಿನ್ನೆಲೆಯಲ್ಲಿ ದಾಖಲೆಯ ಪ್ರಮಾಣದ ಮೊತ್ತದ ಹಣ ಸಂಗ್ರಹವಾಗಿದೆ.

ಮಹಾಮಾರಿ ಕರಿಛಾಯೆಯ ಬಳಿಕ ಮಾದಪ್ಪ ಮತ್ತೇ ಶ್ರೀಮಂತನಾಗುತ್ತಿದ್ದು, ಭಕ್ತರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡಿದೆ. ವಿಶೇಷ ಪೂಜೆಗಳು ನಡೆಯುತ್ತಿದ್ದು, ಬಾರಿಯ ಶಿವರಾತ್ರಿ ಜಾತ್ರೆಗೂ ಮೊದಲು ಹಾಗೂ ನಂತರದ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮಾದಪ್ಪನ ಸನ್ನಿಧಿಗೆ ಆಗಮಿಸಿ ಮಾದಪ್ಪನ ದರ್ಶನ ಪಡೆದು ಕಾಣಿಕೆಯನ್ನು ಅರ್ಪಿಸಿದ್ದಾರೆ.

From Around the web