ಕೋವಿಡ್-19 ಜನಜಾಗೃತಿ ಅರಿವು ಮೂಡಿಸಿದ ಸಂಸದ ಎಸ್.ಮುನಿಸ್ವಾಮಿ

 
ಕೋವಿಡ್-19 ಜನಜಾಗೃತಿ ಅರಿವು ಮೂಡಿಸಿದ ಸಂಸದ ಎಸ್.ಮುನಿಸ್ವಾಮಿ

ಕೋಲಾರ: ಜಿಲ್ಲೆಯ ಮಾಲೂರು ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್-19 ಜನಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಸಂಸದ ಎಸ್. ಮುನಿಸ್ವಾಮಿ ಭಾಗವಹಿಸಿ ಮಾತನಾಡಿದ್ರು.

 ಮಹಾಮಾರಿ ಕೋವಿಡ್-19 ಲಸಿಕೆಯನ್ನು 45 ವರ್ಷ ಮೇಲ್ಪಟ್ಟವರು ಯಾವುದೇ ಅಂತಕ, ಭಯ ಪಡೆದೆ ಪ್ರತಿಯೊಬ್ಬರು ಹಾಕಿಸಿಕೊಂಡು ಕರೋನಾ ಮುಕ್ತ ದೇಶ ಮಾಡಲು ಸಹಕಾರ ನೀಡಬೇಕಾಗಿದೆ ಇನ್ನೂ ನಮ್ಮ ಕೇಂದ್ರ ಮತ್ತು ರಾಜ್ಯ ಸರಕಾರವು ದೇಶದಲ್ಲಿ ಮಹಾಮಾರಿ ಕರೋನಾ ಮುಕ್ತ ಮಾಡಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಪ್ರದಾನಿ ನರೇಂದ್ರಮೋದಿ ನೇತೃತ್ವದಲ್ಲಿ ಹರ್ಷವರ್ದನ್ ಮತ್ತು ವೈಧ್ಯಾದಿಕಾರಿಗಳು ವಿಜ್ಞಾನಿಗಳು ಲಸಿಕೆಯನ್ನು ಕಂಡು ಹಿಡಿದಿರುವುದು ನಮ್ಮ ಹೆಮ್ಮೆ, ಹಾಗೂ ಪ್ರತಿಯೊಬ್ಬ ನಾಗರೀಕರು ಆರೋಗ್ಯವಂತರಾಗಿ ಜೀವನ ನಡೆಸಲು ಕೋಟ್ಯಾಂತರ ಜನಕ್ಕೆ ಉಚಿತವಾಗಿ ಲಸಿಕೆ  ನಮ್ಮ ಕೆಂದ್ರ ಸರಕಾರ ನೀಡಿರುವುದರಿಂದ ಎಲ್ಲಾ ಸಾರ್ವಜನಿಕರಿಗೆ ಉಚಿತವಾಗಿ  ಹಾಕಲಾಗುತ್ತಿದೆ.

 ನಮ್ಮ ದೇಶ ಬಿಟ್ಟು  130 ದೇಶಗಳಿಗೆ ನಮ್ಮ ಭಾರತ  ದೇಶದಿಂದಲ್ಲೇ ಉಚಿತವಾಗಿ ನೀಡುವಂತ ಕೆಲಸವಾಗಿದೆ. ಇನ್ನೂ ನಮ್ಮ ಕೋಲಾರ ಜಿಲ್ಲೆಯಲ್ಲಿ 76 ಲಸಿಕಾ ಕೇಂದ್ರಗಳಿದ್ದು, ಮಾಲೂರು ತಾಲೂಕಿನಲ್ಲಿ 10 ಲಸಿಕಾ ಕೇಂದ್ರಗಳಿವೆ. ಪ್ರತಿ ನಿತ್ಯ 100 ಮಂದಿಗೆ ಲಸಿಕೆ ಹಾಕಲಾಗುವುದು. ಸಕ್ಕರೆ ಖಾಯಿಲೆ. ಬಿಪಿ, ಹೃದಯ ಸಂಬಂಧಿತ ಖಾಯಿಲೆ, ಕ್ಯಾನ್ಸರ್ ಸೇರಿದಂತೆ 45 ವರ್ಷ ಮೇಲ್ಪಟ್ಟಂತವರು ಉಚಿತವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಯಾವುದೇ ಅಡ್ಡ ಪರಿಣಾಮವಿಲ್ಲ. ಭಯ, ಅಂತಕ ಪಡುವ ಅಗತ್ಯವಿಲ್ಲ. ಪ್ರತಿಯೊಬ್ಬರು ಇದರ ಬಗ್ಗೆ ಅರಿವು, ಜಾಗೃತಿ ಮೂಡಿಸಿ ಕರೋನಾ ಮುಕ್ತ ದೇಶವನ್ನಾಗಿ ಮಾಡಲು ಕೈಜೋಡಿಸಬೇಕು ಎಂದು ಹೇಳಿದರು.

ಸಂದರ್ಭದಲ್ಲಿ  ಆರೋಗ್ಯಧಿಕಾರಿ ಡಾ ಪ್ರಸನ್ನ ಕುಮಾರ್ ,ಆಡಳಿತ ಅಧಿಕಾರಿ  ಡಾ. ವಸಂತ್ ಕುಮಾರ್, ಡಾ. ಶ್ರೀನಿವಾಸ್, ಸೇರಿದಂತೆ ಇನ್ನಿತರ ಮುಖಂಡರು ಇದ್ದರು.

From Around the web