ಶಿವರಾತ್ರಿ ಪೂಜಾ  - ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ

 
ಶಿವರಾತ್ರಿ ಪೂಜಾ - ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ

ಚಾಮರಾಜನಗರ: ಶಿವರಾತ್ರಿ ಬಂತೆಂದರೆ ಸಾಕು ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ಪವಾಡ ಪುರುಷ ಮಹದೇಶ್ವರ ಸನ್ನದಿ ಸೇರಿದಂತೆ ಶಿವನ ದೇವಾಲಯದಲ್ಲಿ ಭಕ್ತರ ಕಲರವ ಹೆಚ್ಚಾಗಿರುತ್ತದೆಹೀಗಾಗಿ ಶಿವರಾತ್ರಿ ಹಿಂದಿನ ಬುದವಾರ ರಾತ್ರಿಯಿಂದಲೇ ಪವಾಡ ಪುರುಷ ಮಹದೇಶ್ವರನ ಸನ್ನಿಧಿಯಲ್ಲಿ ಮಹದೇಶ್ವರನಿಗೆ ಬಿಲ್ವಾರ್ಚನೆ, ವಿಶೇಷ ಪೂಜೆ ನಡೆದವು.

ಶಿವರಾತ್ರಿ ಅಂಗವಾಗಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರವು ಕೋವಿಡ್ ಹಿನ್ನೆಲೆಯಲ್ಲಿ ವಿಶೇಷ ಕಾಳಜಿ ವಹಿಸಿ, ಬೇರೆ ಊರು, ಇತರೆ ಜಿಲ್ಲೆಗಳಿಂದ ಬರುವ ಭಕ್ತರಿಗೆ ಬೆಟ್ಟಕ್ಕೆ ಬರದಂತೆ ನಿರ್ಬಂಧ ವಿಧಿಸಿ, ಕೇವಲ ಮಹದೇಶ್ವರಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದೆ.

ಇಂದು ಬೆಳಗ್ಗೆಯಿಂದಲೇ ಮಾದಪ್ಪನಿಗೆ ಬಿಲ್ವಾರ್ಚನೆ, ಪುಷ್ಪಾರ್ಚನೆ ಮಾಡಿ, ಶಿವಲಿಂಗಕ್ಕೆ ಶಿವನ ಮುಖವಾಡ ಧರಿಸಿ, ವಿಶೇಷ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.

ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿರುವ ಶ್ರೀ ಚಾಮರಾಜೇಶ್ವರ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು. ಇಂದು ಬೆಳಗ್ಗೆಯಿಂದಲೇ ಶ್ರೀ ಚಾಮರಾಜೇಶ್ವರಸ್ವಾಮಿಗೆ ಬಿಲ್ವಾರ್ಚನೆ, ಪುಷ್ಪಾರ್ಚನೆ ಮಾಡಿ, ಶಿವಲಿಂಗಕ್ಕೆ ಶಿವನ  ಬೆಳ್ಳಿಯ ಮುಖವಾಡ ಧರಿಸಿ, ವಿಶೇಷ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.

ರಾಜತ್ವದೊಂದಿಗೆ ಈಶ್ವರತ್ವ ಹೊಂದಿರುವ ಅಪರೂಪದ ಶ್ರೀ ಚಾಮರಾಜೇಶ್ವರಸ್ವಾಮಿಯ ದರ್ಶನ ಭಾಗ್ಯದಿಂದ ಸಕಲ ಇಷ್ಟಾರ್ಥ ನೆರವೇರಲಿದೆ ಎನ್ನುವ ನಂಬಿಕೆಯಿಂದ ಭಕ್ತರು ಆಗಮಿಸಿ ಶ್ರೀ ಚಾಮರಾಜೇಶ್ವರಸ್ವಾಮಿ ಹಾಗೂ ಪಕ್ಕದಲ್ಲಿಯೇ ಇರುವ ಶ್ರೀ ಚಾಮುಂಡಿ ತಾಯಿ, ಕೆಂಪನಂಜಾಂಬ ಅಮ್ಮನವರ ದರ್ಶನ ಪಡೆದರು.

From Around the web