ಹಗಲಿನಲ್ಲಿ ಕಳ್ಳರ ಕೈಚಳಕ, ದೇವಿ ಆರಾಧಕರು ಎಂದು ನಂಬಿಸಿ ವೃದ್ದೆಯ ಸರ್ ಕಸಿದು ಪರಾರಿ

 
ಹಗಲಿನಲ್ಲಿ ಕಳ್ಳರ ಕೈಚಳಕ, ದೇವಿ ಆರಾಧಕರು ಎಂದು ನಂಬಿಸಿ ವೃದ್ದೆಯ ಸರ್ ಕಸಿದು ಪರಾರಿ

ಕೋಲಾರ: ದೇವಿ ಆರಾಧಕರು ಎಂದು ವೃದ್ದೆಯನ್ನು ನಂಬಿಸಿದ ಕಳ್ಳರು ಮಾಂಗಲ್ಯ ಸರ್ ಕಸಿದು ಪರಾರಿಯಾಗಿರುವ ಘಟನೆ ಕೋಲಾರ ನಗರದ ಕುಂಬಾರಪೇಟೆಯಲ್ಲಿ ನಡೆದಿದೆ.

ಕುಂಬಾರಪೇಟೆಯಲ್ಲಿ ಮಡಿಕೆ ವ್ಯಾಪಾರ ಮಾಡುತ್ತಿದ್ದ ಯಶೋಧಮ್ಮ ಎಂಬುವರ ಬಳಿ ಮಡಿಕೆ ಖರೀದಿಸುವ ನೆಪದಲ್ಲಿ ಅಗಮಿಸಿದ ಇಬ್ಬರು ಕಳ್ಳರು ತಾವು ದೇವಿ ಆರಾಧಕರು ಎಂದು ನಂಬಿಸಿ ವೃದ್ದೆಯ ಕೊರಳಲ್ಲಿ ಇದ್ದ ಸುಮಾರು 90 ಗ್ರಾಂ ತೂಕದ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದಾರೆ.

ಮಡಿಕೆ ಖರೀದಿಸುವ ಸೋಗಿನಲ್ಲಿ ಬಂದಿದ್ದ ಇಬ್ಬರು ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.  ಮಾಂಗಲ್ಯ ಸರ ಮಡಿಕೆಯಲ್ಲಿ ಹಾಕಿ ಪೂಜೆ ಮಾಡಿ ಕೊಡುತ್ತೇವೆ ಎಂದು ನಂಬಿಸಿದ ಕಳ್ಳರು. ಮಾಂಗಲ್ಯ ಸರ ಹಾಕುತ್ತಿದಂತೆ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾರೆ.

ಜನನಿಬೀಡ ಪ್ರದೇಶದಲ್ಲೇ ನಡೆದ ಕೃತ್ಯಕ್ಕೆ ಸ್ಥಳೀಯರು ಶಾಕ್ ಆಗಿದ್ದು, ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಜಾನ್ಹವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಲ್ ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

From Around the web