ಎಸ್ಪಿ ಖಾತೆಯೇ ನಕಲಿ: ಎಸ್ಪಿ ಹನುಮಂತರಾಯ ನಿರ್ದಾಕ್ಷ್ಯಣ್ಯ ಕ್ರಮಕ್ಕೆ ನಿರ್ಧಾರ

 
ಎಸ್ಪಿ ಖಾತೆಯೇ ನಕಲಿ: ಎಸ್ಪಿ ಹನುಮಂತರಾಯ ನಿರ್ದಾಕ್ಷ್ಯಣ್ಯ ಕ್ರಮಕ್ಕೆ ನಿರ್ಧಾರ

ದಾವಣಗೆರೆ: ಎಸ್ಪಿ ಹನುಮಂತರಾಯ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ವಂಚಸಿ  ಹಣ ಕೇಳಿದರೆ ದೂರು ನೀಡದಂತೆ ಎಸ್ಪಿ ಮನವಿ ಮಾಡದ್ದಾರೆ.

ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆಯೊಂದನ್ನು ತೆರೆದಿರುವ ವಿಚಾರ ಬೆಳಕಿಗೆ ಬಂದಿದ್ದು ಸ್ವತಃ ಎಸ್ಪಿ ಹನುಮಂತರಾಯ ಅವರೇ ಆತಂಕ ವ್ಯಕ್ತಪಡಿಸಿದ್ದಾರೆ.  ಹನುಮಂತರಾಯ ಹೊಸ್ಪೇಟೆ  ಎಂಬ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ರಚಿಸಲಾಗಿದ್ದು, ಅದರಲ್ಲಿ ಎಸ್ಪಿ ಅವರು ಭಾವಚಿತ್ರವನ್ನ ಹಾಕಲಾಗಿದೆ. ಈಗಾಗಲೇ ಈ ಖಾತೆಗೆ ಹಲವಾರು ಜನರು ಪ್ರೆಂಡ್ ಗಳಾಗಿದ್ದು, ಕೆಲವರು ಇನ್ನು ರಿಕ್ವೆಸ್ಟ್ ಗಳನ್ನ ಕಳಿಸುತ್ತಿದ್ದಾರೆ.

ಈ ನಕಲಿ ಖಾತೆ ತೆರೆದಿರುವುದು ಯಾರು ಎಂದು ತಿಳಿದು ಬಂದಿಲ್ಲ. ಈ ಖಾತೆಯ ಮೂಲಕ ಜನರಿಂದ ಹಣ ಹಾಗೂ ಸಹಾಯವನ್ನು ಪಡೆದು ವಂಚನೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಕೂಡಲೇ ಎಚ್ಚೆತ್ತಿರುವ ಎಸ್ಪಿ ಹನುಮಂತರಾಯ ಅವರು ಈ ಖಾತೆ ನಕಲಿ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ, ಈ ಖಾತೆಯ ಮೂಲಕ ಯಾರಾದರೂ ಹಣದ ಆಮೀಷಗಳನ್ನ ಒಡ್ಡಿದರೆ ಹಾಗೂ ಹಣವನ್ನ ಕೇಳಿದರೆ ಯಾರೂ ಉತ್ತರಿಸಬೇಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಇದೀಗ ವಿಷಯ ಗಮನಕ್ಕೆ ಬಂದಿದ್ದು, ನಕಲಿ ಖಾತೆ ತೆರೆದಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವುದಾಗಿಯೂ ಎಸ್ಪಿ ಹನುಮಂತರಾಯ ಸ್ಪಷ್ಟಪಡಿಸಿದ್ದಾರೆ.

From Around the web