ಶಾಲಾ ಕಾಂಪೌಂಡ್ ನಿಂದ ಬಿದ್ದು ವಿದ್ಯಾರ್ಥಿ ಸಾವು

 
ಶಾಲಾ ಕಾಂಪೌಂಡ್ ನಿಂದ ಬಿದ್ದು ವಿದ್ಯಾರ್ಥಿ ಸಾವು !

ಚಾಮರಾಜನಗರ: ಕಾಂಪೌಂಡ್ ನಿಂದ ಬಿದ್ದು ಕುತ್ತಿಗೆ ಬಳಿ ಗಾಯಗೊಂಡ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಕೋಳಿಪಾಲ್ಯ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಗ್ರಾಮದ ಶ್ರೀನಿವಾಸನಾಯ್ಕ ಎಂಬವರ ಮಗ ಲಕ್ಷ್ಮೀಕಾಂತ ಮೃತಪಟ್ಟಿರುವ ವಿದ್ಯಾರ್ಥಿ.  ಮಧ್ಯಾಹ್ನ ಊಟಕ್ಕೆ ಬಿಟ್ಟಿದ್ದ ವೇಳೆಯಲ್ಲಿ ಆಟವಾಡುವಾಗ ಕಾಂಪೌಂಡ್ ನಿಂದ ಬಿದ್ದು ಕುತ್ತಿಗೆ ಭಾಗಕ್ಕೆ ತೀವ್ರತರವಾದ ಗಾಯವಾಗಿ ಸ್ಥಳದಲ್ಲೇ ಅಸುನೀಗಿದ್ದಾನೆ ಎನ್ನಲಾಗಿದೆ.

ಕಾಂಪೌಂಡ್ ನಿಂದ ನೆಗೆಯವಾಗ ಬಿದ್ದನೋ ಅಥವಾ ಈತ ಕುಳಿತಿದ್ದಾಗ ಯಾರಾದರೂ ನೂಕಿದರೋ ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ. ಸದ್ಯ, ಜಿಲ್ಲಾಸ್ಪತ್ರೆಯಲ್ಲಿ ಶವ ಇರಿಸಲಾಗಿದ್ದು ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

From Around the web